Breaking News
Home / Breaking News / ಭಯಾನಕ ಆಕ್ಸಿಡೆಂಟ್, ಬಾಲಕನ ಸಾವು,ಲಾರಿ ಮೇಲೆ ಕಲ್ಲು ತೂರಾಟ…

ಭಯಾನಕ ಆಕ್ಸಿಡೆಂಟ್, ಬಾಲಕನ ಸಾವು,ಲಾರಿ ಮೇಲೆ ಕಲ್ಲು ತೂರಾಟ…

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧದ ನಡುವೆಯೂ ಭಾರಿ ವಾಹನಗಳ,ಮರಣ ಮೃದಂಗ ಮುಂದುವರೆದಿದೆ.

ಇಂದು ಬುಧವಾರ ಬೆಳಗ್ಗೆ ಬೆಳಗಾವಿ ನಗರದ ಕ್ಯಾಂಪ್ ಪ್ರದಶದಲ್ಲಿ ಲಾರಿ ಹಾಯ್ದು,ರಸ್ತೆ ದಾಡುತ್ತಿದ್ದ ಹತ್ತು ವರ್ಷದ ಬಾಲಕ ಬಲಿಯಾಗಿದ್ದು,ಸ್ಕೂಟಿ ಮೇಲೆ ಹೋಗುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಹತ್ತು ವರ್ಷದ ಬಾಲಕ ಅರಹಾನ್ ಬೇಪಾರಿ ಸ್ಥಳದಲ್ಲೇ ಮೃತಪಟ್ಟಿದ್ದು,ಅತೀಕಾ,ಮತ್ತು ಆಯುಷ್ಯ ಎಂಬುವವರು ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸಿದ ಬಳಿಕ,ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ,ಸೇರಿದ್ರು,ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ್ರು,ಲಾರಿ ಮೇಲೆ ಮನಬಂದಂತೆ ಕಲ್ಲು ತೂರಾಟ ನಡೆಸಿದ್ರು,ದೊಣ್ಣೆ ಯಿಂದ ಲಾರಿಯ ಗಾಜುಗಳನ್ನು ಪುಡಿ ಪುಡಿ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ರು.ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

Check Also

ಲಕ್ಷ್ಮಣ ಸವದಿಗೆ ಮುಖ್ಯಮಂತ್ರಿ ಆಗ್ರಿ ಅಂತಾ ಆಶೀರ್ವಾದ ಮಾಡಿದವರು ಯಾರು ಗೊತ್ತಾ.??

ಬೆಳಗಾವಿ-ಲಕ್ಷ್ಮಣ ಸವದಿಗೆ ಸಿಎಂ ಆಗುವಂತೆ ಜೈನ ಮುನಿಗಳು ಆಶೀರ್ವಾದ ಮಾಡಿದ್ದಾರೆ.ಮಾಜಿ ಡಿಸಿಎಂ‌ ಲಕ್ಷ್ಮಣ ಸವದಿಗೆ ಜೈನ್ ಮುನಿಗಳಿಂದ ಆಶೀರ್ವಾದ ಮಾಡಿರುವ …

Leave a Reply

Your email address will not be published. Required fields are marked *