ಬೆಳಗಾವಿ-ಕಳೆದ ಮೂರು ದಿನಗಳಿಂದ ಬೆಳಗಾವಿ ನಗರದಲ್ಲಿ ಕಣ್ಣು ಮುಚ್ಚಾಲೆಯಾಟ ಆಡುತ್ತಿರುವ ಚಿರತೆ ಪತ್ತೆಗೆ ಚಿರತೆ ಕಾಣಿಸಿಕೊಂಡ ಪ್ರದೇಶದಲ್ಲಿ ಸಿಸಿ ಟಿವ್ಹಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.
ಕಾರ್ಮಿಕನ ಮೇಲೆ ಹಲ್ಲೆ ಮಾಡಿ ಮಾಯವಾಗಿರುವ,ಚಿರತೆ ಮರಳಿ ಗೂಡು ಸೇರಿದೆಯಾ..? ಅಥವಾ ಬೆಳಗಾವಿಯಲ್ಲೇ ಉಳಿದುಕೊಂಡಿದೆಯಾ..? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಅರಣ್ಯ ಇಲಾಖೆಯ ಸಿಬ್ಬಂಧಿಗಳು ನಡೆಸಿದ್ದಾರೆ. ಇವತ್ತು ಬೋನು ಗಾಲ್ಫ್ ಮೈದಾನಕ್ಕೆ ಶಿಪ್ಟ್ ಮಾಡಿದ್ದಾರೆ.
ಚಿರತೆಯ ಮೇಲೆ ನಿಗಾ ಇಡಲು ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಕಾಣಿಸಿಕೊಂಡ ಪ್ರದೇಶದಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸುವ ಮೂಲಕ ಚಿರತೆಯ ಚಲನವಲನಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ಕಸರತ್ತು ನಡೆದಿದೆ. ಆದ್ರೆ ಕಿಡಗೇಡಿಗಳು ಚಿರತೆಯನ್ನು ಬಲೆಗೆ ಬೀಳಿಸಿದ ಬೇರೆ ಪ್ರದೇಶದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಬೆಳಗಾವಿಯಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.
ಚಿರತೆ ಇನ್ನೂ ಸಿಕ್ಕಿಲ್ಲ, ಅದರ ಶೋಧಕ್ಕೆ ಎಲ್ಲ ರೀತಿಯ ಪ್ರಯತ್ನಗಳು ನಡೆದಿದ್ದು,ಹನುಮಾನ ನಗರ,ಜಾಧವ ನಗರ,ಸದಾಶಿವ ನಗರ,ಸೇರಿದಂತೆ ಬಾಕ್ಸೈಟ್ ರಸ್ತೆಯ ಅಕ್ಕ ಪಕ್ಕದ ಬಡಾಣೆಗಳ ನಿವಾಸಿಗಳು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.