ಬೆಳಗಾವಿ- ದೇಶದಲ್ಲಿ ಸ್ವತಂತ್ರ ಮಹೋತ್ಸವದ ಅಮೃತೋತ್ಸವ ಆಚರಣೆ ಮಾಡಲಾಗುತ್ತಿದೆ. ದೇಶದಲ್ಲಿ ಸ್ವತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಮೊದಲು ಹೋರಾಟ ಮಾಡಿದ್ದು ಕಿತ್ತೂರಿನ ರಾಣಿ ಚೆನ್ನಮ್ಮ. ಚೆನ್ನಮ್ಮಳ ಬಲಗೈ ಬಂಟನಾಗಿದ್ದ ಅಮಟೂರು ಬಾಳಪ್ಪ ನನ್ನುಇತಿಹಾಸದಲ್ಲಿ ಮರೆಯಲಾಗಿದೆ. ಅಮಟೂರು ಬಾಳಪ್ಪನ ಜಯಂತಿ ಆಚರಣೆ ಮಾಡಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಶ್ರೀ ಕೃಷ್ಣನ ಫೋಟೋ ಕಡ್ಡಾಯವಾಗಿ ಹಾಕಬೇಕು. ಈ ಎರಡು ಬೇಡಿಕೆಗಳ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಹಣಬರ ಯಾದವ ಸಂಘದ ನೇತೃತ್ವದಲ್ಲಿ ಅಮಟೂರನಿಂದ ಬೆಳಗಾವಿಯವರಿಗೆ ಬೈಕ್ ರ್ಯಾಲಿ ನಡೆಸಲಾಯಿತು.
200 ಕ್ಕೂ ಬೈಕ್ ಆಗಮಿಸಿದ ಜನರು ಅಮಟೂರು ಬಾಳಪ್ಪ, ಶ್ರೀಕೃಷ್ಣನ ಪರ ಘೋಷಣೆ ಹಾಕಿದರು. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಸಮಾಜದ ಜನರು ಪಾಲ್ಗೊಂಡಿದ್ದರು. ನಂತರ ಬಸವನ ಕುಡಚಿಯ ಸಭಾಭವನದಲ್ಲಿ ಸಮಾವೇಶ ನಡೆಸಿದರು. ಇದೆ ವೇಳೆ ನಾಗರಾಜ್ ಹನಬರ ಅಂತೂರು ಬಾಳಪ್ಪ ಅವರ ಬಗ್ಗೆ ರಚಿಸಿದ ಆಲ್ಬಮ್ ಸಾಂಗ್ ಸಮಾಜದ ಮುಖಂಡರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು ಕಿತ್ತೂರು ಇತಿಹಾಸದಲ್ಲಿ ಅಮಟೂರು ಬಾಳಪ್ಪ ಹೆಸರು ಅಜಾರಾಮರ. ಬ್ರಿಟಿಷ್ ಅಧಿಕಾರಿ ತ್ಯಾಕರೆಗೆ ಗುಂಡು ಹಾಕಿದ್ದು ಅಮಟೂರು ಬಾಳಪ್ಪ. ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಬಾಳಪ್ಪ ಹೋರಾಟ ಅವಿಸ್ಮರಣೀಯ. ಕೃಷ್ಣ ಜನ್ಮಾಷ್ಠಮಿಯಂದು ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಆಚರಣೆ ಮಾಡಬೇಕು. ಅಮಟೂರು ಬಾಳಪ್ಪ ಸಕಲ ಗೌರವ ಸಲ್ಲಬೇಕು ಎಂದು ಬೆಳಗಾವಿ ಜಿಲ್ಲಾ ಹಣಬರ(ಯಾದವ) ಸಮಾಜದ ಮುಖಂಡರ ಆಗ್ರಹ. ಮಾಡಿದರು.
ನಾಗರಾಜ ಹಣಬರ, ಪ್ರಶಾಂತ ಕೌಲಿಗಿ, ಸಂತೋಷ್ ಕೌತ್, ನಾಗಪ್ಪ ಕಳಸನ್ನವರ್, ಬಸವರಾಜ್ ಸಂತ್ರೆ, ರಾಘವ್ ಹನಬರ್, ಸಮಾಜದದ ಅನೇಕ ಮುಖಂಡರು ಪಾಲ್ಗೊಂಡಿದ್ದರು.