ಬೆಳಗಾವಿಯ ಗಾಲ್ಫ ಮೈದಾನದ
ಮರಗಳ ಪೊದರಿನಲ್ಲಿ ಕಳೆದ
ಶುಕ್ರವಾರದಿಂದ ಅವಿತುಕೊಂಡು
ಕುಳಿತಿರುವ ಚಿತರೆಯು ನಿನ್ನೆ
ಸೋಮವಾರ ರಾತ್ರಿ ಅರಣ್ಯ
ಇಲಾಖೆಯ ಸಿಸಿಟಿವ್ಹಿ ಯಲ್ಲಿ
ಸೆರೆಯಾಗಿದೆ.ಅರಣ್ಯ ಇಲಾಖೆಯೇ ಈ ಪೋಟೋ
ರಿಲೀಸ್ ಮಾಡಿದೆ.
ಚಿರತೆಯನ್ನು
ಹಿಡಿಯಲು ಅರಣ್ಯ ಇಲಾಖೆಯು
ಹಗಲಿರುಳು ಪ್ರಯತ್ನ ನಡೆಸಿದೆ.
ಆರು ಬೋನುಗಳನ್ನು,16 ಸಿಸಿಟಿವಿ
ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ.
ಐವತ್ತು ಜನ ಅರಣ್ಯ ಸಿಬ್ಬಂದಿ
ಶೋಧ ಕಾರ್ಯದಲ್ಲಿ ತೊಡಗಿದೆ.
ಡಿ ಎಫ್ ಓ ಶ್ರೀ ಎಚ್.ಎಸ್.
ಅಂಥೋನಿ,ಎಸಿಎಫ್ ಶ್ರೀ.ಮಲ್ಲಿನಾಥ
ಕುಸನಾಳ ಹಾಗೂ ಇತರ ಸಿಬ್ಬಂದಿ
ಇಂದು ಮಂಗಳವಾರ ಮುಂಜಾನೆಯಿಂದ
ಕಾರ್ಯಾಚರಣೆಯನ್ನು ಪುನಾ
ಆರಂಭಿಸಿದೆ.
ಚಿರತೆಯ ಶೋಧಕ್ಕಾಗಿ
16 ಕ್ಯಾನೆರಾಗಳನ್ನು ಗಾಲ್ಫ ಮೈದಾನದ
ಮರಗಳಿಗೆ ಅಳವಡಿಸಲಾಗಿದೆ.ಈ
ಕ್ಯಾಮೆರಾಗಳಲ್ಲಿ ಸೆರೆಯಾದ
ಚಿರತೆಯ (ಸೋಮವಾರ ರಾತ್ರಿ
ಸೆರೆಯಾಗಿದೆ)ಚಿತ್ರವು ಇಂದು
ಮಂಗಳವಾರ ಮಧ್ಯಾನ್ಹ 12 ಗಂಟೆಗೆ
ನನಗೆ ಅರಣ್ಯ ಇಲಾಖೆಯ ಅಧಿಕೃತ
ಮೂಲಗಳಿಂದ ಲಭಿಸಿದೆ.
ಚಿರತೆಯನ್ನು ಆದಷ್ಟು ಶೀಘ್ರವೇ
ಸೆರೆಹಿಡಿಯುವ ವಿಶ್ವಾಸವನ್ನು
ಅರಣ್ಯ ಇಲಾಖೆಯ ಅಧಿಕಾರಿಗಳು
ವ್ಯಕ್ತಪಡಿಸಿದ್ದಾರೆ.