“ಜಿಲ್ಲೆಯ ಎಲ್ಲ ಶಾಲೆ, ಕಾಲೇಜು, ಸರಕಾರಿ ಕಟ್ಟಡಗಳು, ಅಂಗನವಾಡಿ ಮತ್ತು ಪಂಚಾಯಿತಿ ಕಟ್ಟಡಗಳ ಮೇಲೆ ಆಗಸ್ಟ್ 13 ರಿಂದ ಆ.15 ರವರೆಗೆ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಬೇಕು.
ಆಯಾ ದಿನ ಸೂರ್ಯಾಸ್ತಕ್ಕೆ ಮುಂಚೆ ಧ್ವಜವನ್ನು ಇಳಿಸಬೇಕು.
* ಜಿಲ್ಲೆಯಾದ್ಯಂತ ಎಲ್ಲ ಮನೆಗಳ ಮೇಲೆ ಆಗಸ್ಟ್ 13 ರಂದು ಬೆಳಿಗ್ಗೆ 8 ಗಂಟೆಯಿಂದ ಆಗಸ್ಟ್ 15 ರ ಸೂರ್ಯಾಸ್ತದವರೆಗೆ ಹಗಲು-ರಾತ್ರಿ ಧ್ವಜಾರೋಹಣ ಮಾಡಬಹುದು.
ಆ.15 ರಂದು ಸೂರ್ಯಾಸ್ತಕ್ಕಿಂತ ಮುಂಚೆ ಧ್ವಜವನ್ನು ಇಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಎಲ್ಲರೂ ಕಟ್ಟುನಿಟ್ಟಾಗಿ ಸೂಚನೆಯನ್ನು ಪಾಲನೆ ಮಾಡುವ ಮೂಲಕ “ಹರ್ ಘರ್ ತಿರಂಗಾ” ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
****
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ