Breaking News

ಸ್ವಾತಂತ್ರ್ಯೋತ್ಸವದ ದಿನದಂದು ವಿಭಿನ್ನ, ವಿಶಿಷ್ಟ ಕಾರ್ಯಕ್ರಮ..

ಬೆಳಗಾವಿ ಆ.11: ಕಳೆದ 14 ವರ್ಷಗಳಿಂದ ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತ ಮುಂಚೂಣಿಯಲ್ಲಿರುವ ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಸಂಸ್ಥೆ ಹಾಗೂ ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಚೇರಿ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇದೇ ಆಗಸ್ಟ 15 ರಂದು ಬೆಳಗಾವಿಯ ಮಹಾವೀರ ಭವನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೃಹತ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿತೋ ಸಂಸ್ಥೆಯ ರಕ್ತದಾನ ಶಿಬಿರ ಸಂಯೋಜಕ ಅಭಯ ಆದಿಮನಿ ಅವರು ಇಂದಿಲ್ಲಿ ಹೇಳಿದರು.

ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಇಡೀ ಭಾರತ ದೇಶ ಅಝಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಈ ಆಚರಣೆಯ ಹಿನ್ನಲೆಯಲ್ಲಿ ಜಿತೋ ಸಂಸ್ಥೆಯ ವತಿಯಿಂದ ಬೃಹತ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಜ. 26 ರಂದು ಗಣರಾಜ್ಯೋತ್ಸವ ದಿನದಂದು ಸಹ ಬೃಹತ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಅಂದಿನ ಶಿಬಿರಕ್ಕೆ ಬೆಳಗಾವಿ ನಾಗರಿಕರಿಂದ ಸಾಕಷ್ಟು ಸಹಕಾರ ಮತ್ತು ಪ್ರೋತ್ಸಾಹ ದೊರಕಿತ್ತು. ಈ ಬಾರಿಯೂ ಸಹ ವುವಿಧ ಸಂಘ ಸಂಸ್ಥೆಗಳ ಸಹಕಾರ ಲಭಿಸಿದೆ. ಇದರ ಜೊತೆಗೆ ಕೆಎಲ್‌ಇ ಬ್ಲಡ ಬ್ಯಾಂಕ, ಮಹಾವೀರ ಬ್ಲಡ ಬ್ಯಾಂಕ, ಬಿಮ್ಸ ಬ್ಲಡ ಬ್ಯಾಂಕ, ಬೆಳಗಾಂ ಬ್ಲಡ ಬ್ಯಾಂಕ ಈ ಸಂಸ್ಥೆಗಳು ಸಹ ನಮಗೆ ಸಹಕರಿಸಲಿವೆ ಎಂದು ಅವರು ತಿಳಿಸಿದರು.

ಈಗಾಗಲೇ ಹತ್ತು ಹಲವಾರು ಸಂಘ ಸಂಸ್ಥೆಗಳು ರಕ್ತದಾನ ಶಿಬಿರವನ್ನು ಏರ್ಪಡಿಸಿವೆ. ಆದರೆ ನಾವು ಹಮ್ಮಿಕೊಂಡಿರುವ ರಕ್ತದಾನ ಶಿಬಿರ ವೀಷೆಶವಾಗಿದೆ. ಆಗಸ್ಟ 15 ರಂದು ರಕ್ತದಾನ ಮಾಡುವ ದಾಣಿಗಳಿಗೆ 1 ಲಕ್ಷ ರೂಗಳ ವಿಮೆ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ದಿ. ನ್ಯೂ ಇಂಡಿಯಾ ಎಷ್ಯುರೆನ್ಸ್‌ ಕಂಪನಿಯ ವತಿಯಿಂದ ರಕ್ತ ದಾನಿಗಳಿಗೆ ಜನತಾ ವ್ಯಯಕ್ತಿಕ ಅಪಘಾತ ಪಾಲಿಸಿ ಯೋಜನೆಯಡಿ ಒಂದು ವರ್ಷದ ಅವಧಿಗೆ 1 ಲಕ್ಷ ರು.ಗಳ ವಿಮೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು .ಈ ಯೋಜನೆ ಬೆಳಗಾವಿಯಲ್ಲಿಯೇ ಪ್ರಥಮವಾಗಿದೆ ಎಂದು ಅವರು ತಿಳಿಸಿದರು. ಆಗಸ್ಟ 15 ರಂದು ನಡೆಯುಲಿರುವ ಈ ಬೃಹತ್ತ ರಕ್ತದಾನ ಶಿಬಿರದಲ್ಲಿ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ 9845286152 ಇಲ್ಲಿ ಸಂಪರ್ಕ ಮಾಡಬಹುದು ಎಂದು ಅವರು ತಿಳಿಸಿದರು.

ಪತ್ರಿಕಾಗ್ಟೋಯಲ್ಲಿ ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಪುಷ್ಪಕ ಹನಮಣ್ಣವರ, ಕಾರ್ಯದರ್ಶಿ ಅಮೆರಿಕಾ ತ ದೋಷಿ ಕಾರ್ಯಕ್ರಮ ಯೋಜನಾಧಿಕಾರಿ ಹರ್ಷವರ್ಧನ ಇಂಚಲ, ಕೆಕೆಜಿ ವಲಯದ ಕಾರ್ಯದರ್ಶಿ ವಿಕ್ರಮ ಜೈನ, ದಿ. ನ್ಯೂ ಇಂಡಿಯಾ ಎಷ್ಯುರೆನ್ಸ್‌ ಕಂಪನಿಯ ಸಹಾಯಕ ಪ್ರಬಂಧಕ ರತನ ರಾಮಗೊಂಡಾ ಕೆ.ಎಲ್‌.ಇ.ರಕ್ತ ಭಂಢಾರ ಪ್ರಬಂಧಕ ಶ್ರೀಕಾಂತ ವಿ.ವಿರಗೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *