ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಚಿರತೆ ಆತಂಕ ಮುಂದುವರೆದಿದ್ದು,ನಾಳೆ ಶನಿವಾರವೂ,ಬೆಳಗಾವಿಯ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಳಗಾವಿಯ ಹನುಮಾನ ನಗರದ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷವಾದ ಕಾರಣ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿದೆ. ಮುಂಜಾಗೃತವಾಗಿ,ಬೆಳಗಾವಿಯ ಹನುಮಾನ ನಗರ,ಜಾಧವ ನಗರ,ದೂರದರ್ಶನ ನಗರ,ಜಯ ನಗರ ಹಾಗೂ ಹಿಂಡಲಗಾ ಪ್ರದೇಶದ 22 ಶಾಲೆಗಳಿಗೆ ನಾಳೆ ಶನಿವಾರವೂ ಚಿರತೆ ರಜೆ ಸಿಗಲಿದೆ.
ನಾಳೆ ಶನಿವಾರವೂ 22 ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಳಗಾವಿ ಡಿಡಿಪಿಐ ತಿಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ