ಸಂಕೇಶ್ವರ : ಸಂಕೇಶ್ವರ ಪಟ್ಟಣದಲ್ಲಿ ಇತ್ತಿಚೇಗೆ ನಡೆದ ಬಾಲಕನ ಅಪಹರಣ ಪ್ರಕರಣವನ್ನು ಭೇದಿಸಿರುವ ಸಂಕೇಶ್ವರದ ಪೆÇಲೀಸರು ಬಾಲಕನ ಅಪಹರಣ ಮಾಡಿ ಹಣದ ಬೇಡಿಕೆ ಇಟ್ಟಿದ್ದ ಒಟ್ಟು 6 ಖದೀಮರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಇಂದಿಲ್ಲಿ ಹೇಳಿದರು.
ನಗರದಲ್ಲಿ ಗುರುವಾರ ಸಂಜೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. 2ರಂದು ಸಂಕೇಶರ್ವದ ಭಾಸ್ಕರ ಪ್ರಕಾಶ ಕಾಕಡೆ ಇವರು ಸಂಕೇಶ್ವರ ಪೆÇಲೀಸ ಠಾಣಿಗೆ ತನ್ನನ್ನ ಅಪ್ರಾಪ್ತ 14 ವರ್ಷದ ಮಗ ಶಾಲೆ ಮುಗಿಸಿಕೊಂಡ ಟೂಶನಕ್ಕೆ ಹೋಗುತ್ತಾನೆ. 2ರಂದು ಸಂಜೆ ಟೊಶನಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ಯಾರೋ ಅಪರಿಚಿತ ಆರೋಫಿತನು ತನ್ನ ಮಗನ ಹತ್ತಿರ ಬಂದು ನಿಮ್ಮ ತಂದೆಗೆ ನಿಪ್ಪಾಣಿಯಲ್ಲಿ ದವಾಖಾನೆಗೆ ದಾಖಲೆ ಮಾಡಿದ್ದಾರೆ. ನಿಮ್ಮ ಮನೆಯ ಜನರೆಲ್ಲರು ಅಲ್ಲಿಗೆ ಹೋಗಿದ್ದಾರೆ ಅಂತಾ ಪುಸಲಾಯಿಸಿ ನಾವು ಅಲ್ಲಗೆ ಹೋಗೊಣ ಬಾ ಅಂತಾ ಹೇಳಿ ನಂಬಿಸಿ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿದ್ದರು.
ಸಂಕೇಶ್ವರ ಪೆÇಲೀಸ ಠಾಣೆಯಲ್ಲಿ ಅಪರಾಧ ಸಂಖ್ಯೆ: 178/2022, ಕಲಂ 363 ಐಪಿಸಿ ನೇದ್ದಕ್ಕೆ ಪ್ರಕರಣ ದಾಖಲಸಿಕೊಂಡ ಸಂಕೇಶ್ವರ ಪೆÇೀಲಿಸರು ಒಂದು ಗಂಟೆಯಲ್ಲಿ ಅಪಹರಣವಾದ ಮಗುವನ್ನು ಸಂಕೇಶ್ವರ ಪೆÇೀಲಿಸರು ಪತ್ತೆ ಮಾಡಿದ್ದಾರೆ. ಪ್ರಕರಣದ ಬೆನ್ನು ಹತ್ತಿದ ಸಂಕೇಶ್ವರ ಪೆÇೀಲಿಸರು ಅಪಹರಣಾಕಾರರನ್ನು 15 ದಿನದಲ್ಲಿ ಪತ್ತೆ ಹಚ್ಚಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ಎಂದು ಸಂಜೀವ ಪಾಟೀಲ ತಿಳಿಸಿದರು.
ಹೆಚ್ಚುವರಿ ಎಸ್.ಪಿ ಮಹಾನಿಂಗ ನಂದಗಾವಿ, ಗೋಕಾಕ ಡಿ.ಎಸ್.ಪಿ ಮನೋಜಕುಮಾರ್ ನಾಯಿಕ ಹಾಗೂ ಯಮಕನಮರಡಿ ಪಿಐ ರಮೇಶ ಛಾಯಾಗೋಳ ಮಾರ್ಗದರ್ಶನದಲ್ಲಿ ಪಿಎಸ್‍ಐ ಗಣಪತಿ ಕೊಂಗನೋಳಿ ಹಾಗೂ ಸಿಬ್ಬಂದಿಗಳಾದ ಬಿ.ಕೆ.ನಾಗನೂರಿ ಸಿ.ಎಚ್.ಸಿ 1000, ಎಮ್.ಜಿ.ದಾದಾಮಾಕ ಸಿಪಿಸಿ 3047, ಸಿಪಿಸಿ 2817, ಎಮ್.ಎಮ್.ಕರಗುಪ್ಪಿ, ಸಿಪಿಸಿ 1203, ಬಿ.ವಿ.ಹುಲಕುಂದ ಸಿ.ಎಚ್.ಸಿ 2499. ವಾಯ್.ಎಚ್.ನದಾಫ ಸಿಪಿಸಿ 3496. ಜಿ.ಟಿ.ಪಾಟೀಲ ಸಿಪಿಸಿ 2790, ಬಿ.ಎಸ್.ಕಪರಟ್ಟಿ, ಸಿಪಿಸಿ 2659. ಬಿ.ಎನ್.ಮೇಲ್ಮಟ್ಟಿ ಸಿಪಿಸಿ 3562, ಹಾಗು ಟೆಕ್ನಿಕಲ್ ಸೆಲ್‍ನ್ ಸಚೀನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಮುಂತಾದವರನ್ನು ಒಳಗೊಂಡಿರುವ ಜನರ ತಂಡವನ್ನು ರಚಿಸಿ ಕೂಡಲೇ ಅಪಹರಣಕ್ಕೊಳಗಾದ ಬಾಲಕನನ್ನು ಅದೇ ದಿನ ಪತ್ತೆ ಮಾಡಿದ್ದಾರೆ.
ಆರೋಪಿತರ ಶೋಧ ಕಾರ್ಯ ನಡೆಸಿ 18-08-2022ರಂದು ಹಣದ ಬೇಡಿಕೆಗಾಗಿ ಹಣದ ಬೇಡಿಕೆಗಾಗಿ ಕೃತ್ಯದಲ್ಲಿ ಭಾಗಿಯಾದ 06 ಜನ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರು ಕೃತ್ಯಕ್ಕೆ ಬಳಸಿದ 3 ಮೋಟಾರ ಸೈಕಲ್‍ಗಳನ್ನು ಹಾಗು 6 ಮೊಬೈಲ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಲಕನ ಅಪಹರಣ ಪ್ರಕರಣದಲ್ಲಿ ಪ್ರಸಾದ ಉರ್ಫ ಬಬ್ಲೂ ಸಂಜಯ ರಾವುತ, (20), ನಿಪ್ಪಾನಿ ತಾಲೂಕಿನ ಸಾ. ಅಕ್ಟೋಳ, ದೀಪಕ ಶಾಮಸಿಂಗ್ ಚಿಲವಾರ, (21) ನದಿಗಲ್ಲಿ ಸಂಕೇಶ್ವರ ತಾ. ಹುಕ್ಕೇರಿ ಹಾಗೂ ಬೆಳಗಾವಿಯ
ವಂಟಮೂರಿ ಕಾಲೋನಿಯ ರಾಮತೀರ್ಥ ನಗರದ ಸುಲ್ತಾನರಾಜು ಹುಸೇನ ಮುಜಾವರ (19) ಮತ್ತು ರಮೇಶ ಯಲಪ್ಪಾ ಅಚಗತ್ತಿ. (19) ಮತ್ತು ಡಾಲರ ಕಾಲೋನಿ ನಿಪ್ಪಾಣಿಯ ಸೌರಭ ದಗಡು ತಳವಾರ, (22) ವಿನಾಯಕ ಪಂಡರಿನಾಥ ಪಾಂಡವ (23) ಬಂಧಿತರಾಗಿದ್ದಾರೆ ಎಂದು ತಿಳಿಸಿದರು.
ಈ ಪ್ರಕರಣ ಪತ್ತೆ ಹಚ್ಚಿದ ಸಂಕೇಶ್ವರ ಪೆÇೀಲಿಸರ ಕಾರ್ಯವನ್ನು ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸಿಪಿಐ ರಮೇಶ ಛಾಯಾಗೋಳ, ಪ್ರಹ್ಲಾದ್ ಚೆನ್ನಗೀರಿ, ಪಿಎಸ್‍ಐ ಗಣಪತಿ ಕೊಂಗನೊಳಿ ಉಪಸ್ಥಿತರಿದ್ದರು.