ಚೀರಾಡಿ,ಕೂಗಾಡಿ,,ಪಟಾಕಿ ಸಿಡಿಸಿದ್ರೂ,ಚಿರತೆ ಕಾಣಲಿಲ್ಲ…!!
ಬೆಳಗಾವಿ-ಬೆಳಗಾವಿಯಲ್ಲಿ ಕಳೆದ ಎರಡು ವಾರಗಳಿಂದ ಚಿರತೆಯ ಭಯ ಎಲ್ಲರನ್ನು ಕಾಡುತ್ತಿದೆ.ಬೆಳಗಾವಿಯಲ್ಲಿ ಈಗ ನಾಯಿ ನೋಡಿದ್ರೂ ಅದು ಚಿರತೆ ಹಾಗೆ ಕಾಣಿಸುತ್ತಿದೆ.
ಚಿರತೆ ಪತ್ತೆಗೆ ಅರಣ್ಯ ಇಲಾಖೆಯವರು,ಬೋನು ಇಟ್ಟರು, ಅದರಲ್ಲಿ ನಾಯಿ ಕಟ್ಟಿದರು,ಚಿರತೆ ಚಲನ ವಲನ ಗಮನಿಸಲು,ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿದರು,ಆದ್ರೆ ಕೇವಲ ಒಂದೇ ಬಾರಿ ಆ ಚಾಲಾಕಿ ಚಿರತೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ಎರಡು ವಾರಗಳ ಕಾಲ ಸಿಸಿ ಕ್ಯಾಮರಾ ಚಕ್ ಮಾಡಿ ಸುಸ್ತಾದ ಅರಣ್ಯ ಇಲಾಖೆಯ ಅಧಿಕಾರಿಗಳು ನಿನ್ನೆ ಶುಕ್ರವಾರ ಪೋಲೀಸ್ ಇಲಾಖೆಯ ಸಹಕಾರದೊಂದಿದೆ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಕಾರ್ಯಾಚರಣೆ ನಡೆಸಿದ್ರು.
ಅರಣ್ಯ ಇಲಾಖೆ,ಮತ್ತು ಪೋಲೀಸ್ ಇಲಾಖೆಯ ಸುಮಾರು 200 ಕ್ಕೂ ಹೆಚ್ವು ಸಿಬ್ಬಂಧಿಗಳು ಚೀರಾಡುತ್ತ,ಕೂಗಾಡುತ್ತ,ಡ್ರಮ್ ಬಾರಿಸುತ್ತ,ಪಟಾಕಿ ಸಿಡಿಸುತ್ತ,ಗಾಲ್ಫ್ ಮೈದಾನದಲ್ಲಿ ಇರುವ ಅರಣ್ಯ ಪ್ರದೇಶದ ಒಳಗೆ ನುಗ್ಗಿದರೂ ಚಿರತೆ ಪತ್ತೆಯಾಗಲಿಲ್ಲ.
ಫೇಕ್ ವಿಡಿಯೋ,ಫೇಕ್ ಪೋಟೋಗಳ ಹಾವಳಿ..
ಬೆಳಗಾವಿಯಲ್ಲಿ ಚಿರತೆ ಪತ್ತೆಯಾದಾಗಿನಿಂದ ಬೆಳಗಾವಿಯಲ್ಲಿ ಫೇಕ್ ವಿಡಿಯೋ,ಫೇಕ್ ಪೋಟೋಗಳ ಹಾವಳಿ ಹೆಚ್ಚಾಗುತ್ತಿದೆ,ಬೆಳಗಾವಿಯಲ್ಲಿ ಚಿರತೆ ಕಂಡಿದೆ ಎಂದು ಬೇರೆ ರಾಜ್ಯಗಳ ವಿಡಿಯೋಗಳನ್ನು ಎಡಿಟ್ ಮಾಡಿ,ಬೆಳಗಾವಿಯ ನಗರ ನಿವಾಸಿಗಳಲ್ಲಿ ಭೀತಿ ಹುಟ್ಟಿಸುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ.
ಅಲ್ಲಿದೆ,ಇಲ್ಲಿದೆ,ಎಲ್ಲಿದೆ ಚಿರತೆ..??
ಚಿರತೆ ಬೆಳಗಾವಿಗೆ ಬಂದಾಗಿನಿಂದ ವದಂತಿಗಳ ಹಾವಳಿಯೂ ಹೆಚ್ಚಾಗಿದೆ.ನಾಯಿ ನೋಡಿದರೂ ಚಿರತೆ ನೋಡಿದ್ದೇವೆ.ಅಂತಾ ವದಂತಿ ಹರಡಿಸುತ್ತಿದ್ದಾರೆ. ನಿನ್ನೆ ಶುಕ್ರವಾರ ಶಾಹು ನಗರ,ಕ್ಲಬ್ ರಸ್ತೆಯ ವನಿತಾ ವಿದ್ಯಾಲಯದ ಪರಿಸರದಲ್ಲೂ ಚಿರತೆ ಕಂಡಿದೆ ಎನ್ನುವ ವದಂತಿಗಳು ಹರಡಿದ್ದವು.ಆದ್ರೆ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಕಂಡಿಲ್ಲ,ಚಿರತೆ ಹಿಡಿದಿಲ್ಲ,ಕಾರ್ಯಾಚರಣೆ ನಿಂತಿಲ್ಲ ಎನ್ನುವ ಉತ್ತರ ಕೊಡುತ್ತಿದ್ದಾರೆ.