Breaking News
Home / Breaking News / ಕ್ಷೇತ್ರದಲ್ಲಿ ಪ್ರಚಾರ ನಡೆಸದೇ, ಹಣ ಖರ್ಚು ಮಾಡದೇ ಗೆದ್ದಿದ್ದೇನೆ.

ಕ್ಷೇತ್ರದಲ್ಲಿ ಪ್ರಚಾರ ನಡೆಸದೇ, ಹಣ ಖರ್ಚು ಮಾಡದೇ ಗೆದ್ದಿದ್ದೇನೆ.

ಬೆಳಗಾವಿ-

ಕೆಪಿಸಿಸಿ ಕಾರ್ಯಾಧ್ಯಕ್ಷ ಯಮಕನಮರಡಿ ಕ್ಷೇತ್ರದ ಶಾಸಕ,ಮಾಜಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಅವರು,ಯಮಕನಮರಡಿ ಕ್ಷೇತ್ರದಿಂದ ಸ್ಪರ್ದೆ ಮಾಡುವ ಕುರಿತು ಮಾದ್ಯಮಗಳ ಎದುರು ಹಲವಾರು ವಿಚಾರಗಳನ್ನು ಬಿಚ್ವುಡುವ ಮೂಲಕ ಅನೇಕ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನಿನ್ನೆ ಶುಕ್ರವಾರ, ಬೆಳಗಾವಿಯಲ್ಲಿ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು,2018ರ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಕಡಿಮೆ ಅಂತರದಲ್ಲಿ ಗೆಲುವು ಆಗಿದ್ದು ನಿಜ.ಕಳೆದ ಚುನಾವಣೆಯಲ್ಲಿ ಸ್ವಪಕ್ಷ ನಾಯಕರ ಪಿತೂರಿ ಬಗ್ಗೆ ಗುಟ್ಟು ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ ,ಕಳೆದ ಬಾರಿ ನಮ್ಮ ಪಕ್ಷದ ಹಣ ನಮ್ಮ ಲೀಡ್ ಕಡಿಮೆಯಾಗಲು ಕಾರಣ ಆಯ್ತು ಎಂದಿದ್ದಾರೆ.ಈ ಸಾರಿ ಆ ಹಣ ಯಾವುದೂ ಬರಲ್ಲ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಯಾರು ಸರ್ ಹಣ ಕೊಟ್ಟಿದ್ದು ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ನಮ್ಮವರೇ ನಮ್ಮ ಪಕ್ಷದವರಿಂದಲೇ ಹಣ ಬಂದಿತ್ತು,ಬಿಜೆಪಿ ಹಣದಿಂದ ನನ್ನ ಲೀಡ್ ಕಡಿಮೆ ಆಗಿಲ್ಲ.ಈಗ ಆ ಹಣ ಬರಲ್ಲ ಆ ಕಡೆಯಿಂದ ಬ್ಲಾಕ್ ಆಗುತ್ತೆ, ಆ ಹಣ ನಮ್ಮ ಪರವಾಗಿರುತ್ತೆ ಎಂದು ಸತೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೀವು ಆ ಕಡೆ ಹಣ ಕೊಟ್ಟಿದ್ರಿ ಎಂದು ಮಾಧ್ಯಮಗಳ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು,ಕರೆಕ್ಟ್ ಅದು ಇಕ್ವಲ್ ಇಕ್ವಲ್ ಆಯ್ತಲ್ಲ.ಈ ಸಲ ಅವರೂ ಏನೂ ಮಾಡಲ್ಲ ನಾವೂ ಏನೂ ಮಾಡುವ ಪ್ರಶ್ನೆ ಇಲ್ಲ.ಸ್ವಪಕ್ಷದಲ್ಲಿದ್ದ ವಿರೋಧಿಗಳು ಈಗ ಒಂದಾಗಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಸಂದೇಶ ರವಾನಿಸಿದ್ದಾರೆ.ಯಾರ ಹೆಸರನ್ನು ಪ್ರಸ್ತಾಪಿಸದೇ ಪರೋಕ್ಷವಾಗಿ ಸಂದೇಶ ರವಾನೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಕಟ್ಟಿಹಾಕಲು ಬಿಜೆಪಿ ತಂತ್ರಗಾರಿಕೆ ಮಾಡುತ್ತಿದೆ ಎಂಬ ವಿಚಾರದ ಕುರಿತು,ಅದಕ್ಕೆ ಪೂರಕವಾಗಿ ಈಗಾಗಲೇ ಅವರ ಕಾರ್ಯಕ್ರಮ ನಡೀತಿದೆ.ಅವರು ಒಂದೊಂದು ಹೆಜ್ಜೆ ಇಡುತ್ತಿರೋದು ಗೊತ್ತಿದೆ.ನನ್ನ ಕಟ್ಟಿ ಹಾಕಲಿಕ್ಕೆ ಆಗಲ್ಲ, ನಾವು ಈಗ ಅಡ್ಡಾಡುತ್ತಿದ್ದೇವಲ್ಲ.ನಮ್ಮ ಜನ ಕ್ಷೇತ್ರದ ಹಿಡಿತ ಬಗ್ಗೆ ನಮಗೆ ಗೊತ್ತಿದೆ, ಜನ ಯಾರ ಪರವಾಗಿದ್ದಾರೆ ಗೊತ್ತು,ನನ್ನ ಕಟ್ಟಿ ಹಾಕಲಂತೂ ಸಾಧ್ಯವೇ ಇಲ್ಲ ಎಂದು ಸತೀಶ್ ಹೇಳಿದ್ದಾರೆ.

ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಆಪ್ತ ಸಹಾಯಕರ ಹಾವಳಿ ವಿಚಾರ,ನಾವು ಎಲ್ಲಿ ರೂಲಿಂಗ್‌ನಲ್ಲಿ ಇರ್ತೀವಿ ಅಲ್ಲಿ ಮೈನಸ್ ಇದ್ದೇ ಇರ್ತದ,ಪ್ರಮುಖ ಕಾರ್ಯಕರ್ತರು, ಆಪ್ತ ಸಹಾಯಕರು ಇಲ್ಲದೇ ಕೆಲಸ ಮಾಡಲು ಸಾಧ್ಯವಿಲ್ಲ.ತಪ್ಪನ್ನು ಸರಿ ಮಾಡಲು ನಿರಂತರ ಪ್ರಯತ್ನ ಮಾಡ್ತಾನೇ ಇರ್ತೇವೆ.ಆಪ್ತ ಸಹಾಯಕರು ಇಲ್ಲದೇ ಶಾಸಕರು ಕೆಲಸ ಮಾಡಲು ಕಷ್ಟ.ಕಳೆದ ಬಾರಿ ನಿಮ್ಮ ಲೀಡ್ ಕಡಿಮೆ ಇದ್ದಿದ್ದಕ್ಕೆ ಬಿಜೆಪಿ ಟಾರ್ಗೆಟ್ ಮಾಡಿದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಬಿಜೆಪಿಯವರು ಎಂ ಆರ್ ಪಿ ಫಿಕ್ಸ್ ಎಂದು ಹಿಡಿದುಕೊಂಡು ಕುಳಿತಿದ್ದಾರೆ,ಇದು ರಾಜಕೀಯ ಆಗಿನ ಸಂದರ್ಭ ಬೇರೆ ಇತ್ತು ಈಗ ಬೇರೆ ಇದೆ.ಕ್ಷೇತ್ರದಲ್ಲಿ ಪ್ರಚಾರ ನಡೆಸದೇ, ಹಣ ಖರ್ಚು ಮಾಡದೇ ಗೆದ್ದಿದ್ದೇನೆ.ಇದರ ಅರಿವು ಬಿಜೆಪಿ ನಾಯಕರಿಗೆ ಇಲ್ಲ.ಕ್ಷೇತ್ರದಲ್ಲಿ ಪ್ರಚಾರ ಮಾಡದೇ ಗೆಲ್ಲಬೇಕು ಎಂಬ ಹಠ ಇತ್ತು,ಕಿತ್ತೂರು ಕರ್ನಾಟಕದ ಭಾಗದಲ್ಲಿ 56 ವಿಧಾನಸಭೆ ಕ್ಷೇತ್ರಗಳು ಇವೆ.ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪೈಕಿ ನನ್ನ ಕ್ಷೇತ್ರದಲ್ಲಿ ಕೇವಲ 2500 ಮೈನಸ್ ಇದೆ.2019ರ ಲೋಕಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ನಾಯಕರು ನೋಡಬೇಕು.

ಇನ್ನೂ ನಮ್ಮ ಪಕ್ಷದ ನಾಯಕರ ಕ್ಷೇತ್ರದಲ್ಲಿ 30 ರಿಂದ 40 ಸಾವಿರ ಮೈನಸ್ ಆಗಿದೆ.30 ಸಾವಿರ ಲೀಡ್ ಕಡಿಮೆ ಇದ್ದವರು ಗೆಲ್ತಾರೆ ಅಂದ್ರೆ 2500 ಲೀಡ್ ಕಡಿಮೆ ಇದ್ದವನು ಸೋಲ್ತೀನಾ? ಎಂದು ಪ್ರಶ್ನಿಸಿದ ಸತೀಶ್ ಜಾರಕಿಹೊಳಿ,ಬಿಜೆಪಿಯವರು ಸ್ಟಡಿ ಮಾಡಿ 56 ಕ್ಷೇತ್ರಗಳ ಲೆಕ್ಕ ತೆಗೆಯಬೇಕು,ಅದರಲ್ಲಿ ಸಿದ್ದರಾಮಯ್ಯ ಇದಾರೆ, ಎಂ.ಬಿ.ಪಾಟೀಲ್ ಇದಾರೆ, ಆರ್.ವಿ.ದೇಶಪಾಂಡೆ ಇದ್ದಾರೆ.ಬಹಳಷ್ಟು ಕಾಂಗ್ರೆಸ್ ಘಟಾನುಘಟಿ ನಾಯಕರ ಕ್ಷೇತ್ರದಲ್ಲಿ ಲೀಡ್ ಕಡಿಮೆ ಆಗಿದೆ.ಆದರೂ ಕೂಡ ಅವರು ಎಂಎಲ್‌ಎ ಆಗಿ ಗೆಲ್ಲುತ್ತಿದ್ದಾರೆ.ನಾವು ಅಷ್ಟ ಸುಲಭವಾಗಿ ನಮ್ಮ ಕ್ಷೇತ್ರ ಬಿಟ್ಟುಕೊಡ್ತೀವಾ ? ಒಂದೊಂದು ಚುನಾವಣೆ ಬೇರೆ ಬೇರೆ ಆಗಿರುತ್ತದೆ ಒಂದೇ ತರ ಇರಲ್ಲ ಎಂದ ಸತೀಶ್ ಹೇಳಿದ್ದಾರೆ.

Check Also

ಬೆಳಗಾವಿಯ ನಾಲ್ಕು ಜನ ಯುವತಿಯರು ನೀರು ಪಾಲು

ಬೆಳಗಾವಿ- ಬೆಳಗಾವಿಯಲ್ಲಿ ಘನಘೋರ ದುರಂತ ನಡೆದಿದೆ‌ *ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವುನೊಪ್ಪಿದ್ದಾರೆ. ಕರ್ನಾಟಕ ಮಹಾರಾಷ್ಟ್ರ …

Leave a Reply

Your email address will not be published. Required fields are marked *