ಜಾರಕಿಹೊಳಿ ಬ್ರದರ್ಸ್ ಹೆಸರು ಪ್ರಸ್ತಾಪಿಸದ, ಮಾರುತಿ ಅಷ್ಟಗಿ…

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಅಖಾಡಾ ರೆಡಿಯಾಗುತ್ತಿದೆ.ಅದರಲ್ಲೂ ವಿಶೇಷವಾಗಿ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಈಗಿನಿಂದಲೇ ಸಿದ್ಧತೆ ನಡೆಸಿದೆ.

ಯಮಕನಮರಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಪರಾಭವಗೊಂಡಿರುವ ಮಾರುತಿ ಅಷ್ಟಗಿ ಅವರಿಗೆ ಬಿಜೆಪಿ ಕರಕುಶಲ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದ್ದು ಅಷ್ಟಗಿ ಇಂದು ಯಮಕನಮರಡಿ ಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ.

ಇಂದು ರವಿವಾರ ಮಧ್ಯಾಹ್ನ 12-00 ಗಂಟೆಗೆ ಯಮಕನಮರಡಿ ಯಲ್ಲಿ ನಡೆಯಲಿರುವ ಅಭಿನಂಧನಾ ಕಾರ್ಯಕ್ರಮಕ್ಕೆ ಬರುವ ಬಿಜೆಪಿ ನಾಯಕರ ಹೆಸರು ಪ್ರಸ್ತಾಪಿಸಿ,ಮಾರುತಿ ಅಷ್ಟಗಿ ವಿಡಿಯೋ ರಿಲೀಸ್ ಮಾಡಿದ್ದು, ಈ ವಿಡಿಯೋ ದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ,ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಹೆಸರನ್ನು ಮಾರುತಿ ಅಷ್ಟಗಿ ಪ್ರಸ್ತಾಪಿಸಿಲ್ಲ.

ಬಿಜೆಪಿ ನಾಯಕರಾದ, ರಮೇಶ್ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ ಅವರ ಹೆಸರು ಪ್ರಸ್ತಾಪಿಸದ ಮಾರುತಿ ಅಷ್ಟಗಿ, ಅಭಿನಂದನಾ ಕಾರ್ಯಕ್ರಮಕ್ಕೆ ಕತ್ತಿ ಬದರ್ಸ್,ಜೊಲ್ಲೆ ದಂಪತಿಗಳು,ಮಹಾಂತೇಶ ಕವಟಗಿಮಠ,ಸಂಜಯ ಪಾಟೀಲ,ಪಿ ರಾಜೀವ ಲಕ್ಷ್ಮಣ ಸವದಿ, ಮಹಾಂತೇಶ ದೊಡ್ಡಗೌಡರ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಭಾಗವಹಿಸುತ್ತಿದ್ದಾರೆ.ಎನ್ನುವ ಮಾಹಿತಿ ಇರುವ ವಿಡಿಯೋ ಮಾರುತಿ ಅಷ್ಟಗಿ ರಿಲೀಸ್ ಮಾಡಿದ್ದಾರೆ.

ಒಟ್ಟಾರೆ,ಬೆಳಗಾವಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯ ತಯಾರಿ ಶುರುವಾಗಿದ್ದು, ಬಿಜೆಪಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಲು ತಂತ್ರ ರೂಪಿಸಿದ್ದು.ಸತೀಶ್ ಜಾರಕಿಹೊಳಿ ಸಹ,ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಓಡಾಡುತ್ತಿದ್ದಾರೆ.

ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಇತ್ತೀಚಿಗೆ ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *