ಬೆಳಗಾವಿಯಲ್ಲಿ ಕೊನೆಗೂ ಪ್ರತ್ಯಕ್ಷವಾದ ಚಿರತೆ…
ಮೊಬೈಲ್ ನಲ್ಲಿ ಸೆರೆಸಿಕ್ಕಿತು
ಬೆಳಗಾವಿಯ “ಮಾಯಾವಿ ಚಿರತೆ”!!
ಕಳೆದ ಅಗಷ್ಟ 5 ರಿಂದ ಅರಣ್ಯ
ಇಲಾಖೆಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ
ಗಾಲ್ಫ ಕ್ಲಬ್ ಚಿರತೆ ಇಂದು ಸೋಮವಾರ
ಅಗಷ್ಟ 22 ರಂದು ಬೆಳಿಗ್ಯೆ 6.15 ಕ್ಕೆ
ಬಸ್ ಚಾಲಕರೊಬ್ಬರ ಮೊಬೈಲ್ ನಲ್ಲಿ
ಸೆರೆ ಸಿಕ್ಕಿದೆ.ಬೆಳಗಾವಿ ಹಿಂಡಲಗಾ
ರಸ್ತೆಯಲ್ಲಿರುವ ವನಿತಾ ವಿದ್ಯಾಲಯದ
ಬಳಿಯ ಡಬಲ್ ರೋಡಿನಲ್ಲಿ
ಚಿರತೆ ಓಡುತ್ತಿದ್ದಾಗಲೇ ಬಸ್
ಚಾಲಕರು ಬಸ್ ನಿಲ್ಲಿಸಿ ಮೊಬೈಲ್ ನಲ್ಲೇ
ಸೆರೆಹಿಡಿದಿದ್ದಾರೆ.
ಚಿರತೆಯ ಶೋಧಕ್ಕಾಗಿ ವ್ಯಾಪಕ
ಶೋಧ ನಡೆದರೂ ಅದು ಸಿಕ್ಕಿರಲಿಲ್ಲ.
ಇಂದು ಬೆಳಿಗ್ಯೆ ಕಾಣಿಸಿದ್ದರಿಂದ
ಮತ್ತೆ ಆತಂಕ ಶುರುವಾದಂತಾಗಿದೆ.
ಸೋಮವಾರ golf ಮೈದಾನದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿ ಸಿಕೊಂಡ ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ ಹಾಗೂ ಮಾನ್ಯ ಉಪ ನಿದೇಶಕರು ಬೆಳಗಾವಿ ಇವರ ಮೌಖಿಕ ಆದೇಶದಂತೆ ಇಂದು ಸೋಮವಾರ ಬೆಳಗಾವಿ ನಗರ ವಲಯದ ನಿಗದಿತ 22 ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ