ಎರಡು ಆನೆಗಳೊಂದಿಗೆ ಬೆಳಗಾವಿ ತಲುಪಿದ ಸಕ್ರೆಬೈಲ್ ಟೀಂ…

ಚಿರತೆ ಪತ್ತೆ ಕಾರ್ಯಾಚರಣೆಗಾಗಿ ಶಿವಮೊಗ್ಗದ ಸಕ್ರೆಬೈಲ ನಿಂದ ಎರಡು ಆನೆಗಳ ಜೊತೆ  ಎಕ್ಸಪರ್ಟ್ ಟೀಂ ಮದ್ಯರಾತ್ರಿ ಎರಡು ಗಂಟೆಗೆ ಬೆಳಗಾವಿ ತಲುಪಿದೆ..ಆನೆಗಳು ರೆಸ್ಟ್ ಮಾಡುತ್ತಿದ್ದು ಇನ್ನೇನು ಕಾರ್ಯಾಚರಣೆ ಶುರುವಾಗಲಿದೆ

ಬೆಳಗಾವಿ: ಇಲ್ಲಿಯ ಗಾಲ್ಫ್ ಮೈದಾನದಲ್ಲಿ 20 ದಿನಗಳಿಂದ ಅರಿತುಕೊಂಡಿರುವ ಚಿರತೆ ಸೆರೆ ಹಿಡಿಯಲು ಶಿವಮೊಗ್ಗದ ಸಕ್ರೇಬೈಲು ಆನೆಬಿಡಾರದಿಂದ ಬುಧವಾರ ಬೆಳಗ್ಗೆ ಬಂದ ಎರಡು ಆನೆಗಳು ಕಾರ್ಯಾಚರಣೆ ಆರಂಭಿಸಿವೆ.

ಅರಣ್ಯ ಸಚಿವರ ಕ್ಷೇತ್ರದಲ್ಲಿ ಚಿರತೆ ಸೆರೆ ಕಾರ್ಯಾಚರಣೆಗೆ ಆಗಮಿಸಿರುವ ಈ ಎರಡೂ ಆನೆ‌ಗಳು ಗಾಲ್ಫ್ ಕೋರ್ಸ್ ನ ಪೊದೆಯೊಳಗೆ‌ ನುಗ್ಗಿವೆ.

ಡಾಟಿಂಗ್ ಸ್ಪೆಷಲಿಸ್ಟ್ ವನ್ಯಜೀವಿ ತಜ್ಞ ಡಾ. ವಿನಯ ನೇತೃತ್ವದಲ್ಲಿ ಈ ಸ್ಪೇಷಲ್ ಟೀಂ ಬಂದಿವೆ. ಸಕ್ರೇಬೈಲು ಬಿಡಾರದ ಅರ್ಜುನ ಹಾಗೂ ಆಲೆ ಆನೆ ಬಂದಿವೆ. ವೈದ್ಯರು, ಸಹಾಯಕ ಸಿಬ್ಬಂದಿ, ಮಾವುತರು, ಕಾವಾಡಿಗಳು ಮತ್ತು ಬಿಡಾರದ ಸಹಾಯಕ ಸಿಬ್ಬಂದಿ ಸೇರಿದಂತೆ 8 ಜನರ ತಂಡ ಆಗಮಿಸಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *