ಬೆಳಗಾವಿ- ಬೆಳಗಾವಿಯ ಗಾಲ್ಫ್ ಅರಣ್ಯದಲ್ಲಿ ಚಿರತೆ ಪತ್ತೆಗೆ ನಡೆಯುತ್ತಿರುವ ಕಾರ್ಯಾಚರಣೆ ಇವತ್ತು 23 ನೇ ದಿನಕ್ಕೆ ಕಾಲಿಟ್ಟಿದೆ.ಇವತ್ತು ನಿಜವಾಗಿಯೂ ಅತ್ಯಂತ ವ್ಯವಸ್ಥಿತ ಕಾರ್ಯಾಚರಣೆ ನಡೆಯುತ್ತಿದೆ.300 ಕ್ಕೂ ಹೆಚ್ಚು ಜನ ಚಿರತೆಗೆ ಘೇರಾವ್ ಹಾಕಿ ಅದನ್ನು ಬಲೆಗೆ ಬೀಳಿಸಲು ಅಥವಾ ಅರವಳಿಕೆ ಚುಚ್ಚುಮದ್ದು ಸಿಡಿಸಲು ಸಜ್ಜಾಗಿದ್ದಾರೆ.
ಬೆಳಗಾವಿಯಲ್ಲಿ ಚಾಲಾಕಿ ಚಿರತೆ ಪತ್ತೆಗೆ 23ನೇ ದಿನವೂ ಶೋಧ ಮುಂದುವರೆದಿದೆ.ಸೋಮವಾರದಂದು ಚಿರತೆ ರಸ್ತೆ ದಾಟಿದ್ದ ಸ್ಥಳದಲ್ಲಿ ಹೈ ಅಲರ್ಟ್ಘೋಷಿಸಲಾಗಿದ್ದು.ಬೆಳಗಾವಿ ಹಿಂಡಲಗಾ ಮಧ್ಯದ ಕ್ಲಬ್ ರಸ್ತೆಯ ಬಳಿ ತೀವ್ರ ನಿಗಾ ಇಡಲಾಗಿದೆ.ಗಾಲ್ಫ್ ಮೈದಾನದೊಳಗೆ ಚಿರತೆ ಶೋಧಕ್ಕಾಗಿ ಕೋಂಬಿಂಗ್ ನಡೆಯುತ್ತಿದೆ.
ಚಿರತೆ ಕ್ಲಬ್ ರಸ್ತೆ ಮಾರ್ಗದಲ್ಲೇ ಬಂದು ಎಸ್ಕೇಪ್ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ,ಗಾಲ್ಫ್ ಮೈದಾನದೊಳಗೆ ಕ್ಲಬ್ ರಸ್ತೆಯ ಪಕ್ಕದಲ್ಲಿ ಆನೆ ಮೇಲೆ ಕುಳಿತು ಅರವಳಿಕೆ ತಜ್ಞ ಡಾ.ವಿನಯ್ ವಾಚಿಂಗ್ ಮಾಡ್ತಾ ಇದ್ದಾರೆ.ಚಿರತೆ ಬಂದರೆ ಟ್ರಾಂಕುಲೈಸರ್ ಗನ್‌ನಿಂದ ಫೈರ್ ಮಾಡಲು ಗುರಿ ಇಟ್ಟು ಕುಳಿತಿದ್ದಾರೆ.ಬೆಳಗಾವಿ ಹಿಂಡಲಗಾ ಸಂಪರ್ಕಿಸುವ ಕ್ಲಬ್ ರಸ್ತೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಬಹುತೇಕ ಎಲ್ಲ ಅರಣ್ಯ ಇಲಾಖೆಯ ಸಿಬ್ಬಂಧಿಗಳು, ಅಧಿಕಾರಿಗಳು,ಬೆಳಗಾವಿ,ಹುಕ್ಕೇರಿ,ಗೋಕಾಕ್ ತಾಲ್ಲೂಕುಗಳಿಂದ ಹಂದಿ ಹಿಡಿಯುವ ಪರಣಿತರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
250 ಕ್ಕೂ ಹೆಚ್ಚು ಎಕರೆ ಪ್ರದೇಶದ ಸುತ್ತ 300ಕ್ಕೂ ಹೆಚ್ಚು ಸಿಬ್ಬಂದಿ ಗಸ್ತು ತಿರುಗುತ್ತಿದ್ದು ಗಾಲ್ಫ್ ಮೈದಾನದ ಸುತ್ತುವರೆದು ಕಾವಲು ಕಾಯುತ್ತಿದ್ದಾರೆ.
ಶತಾಯಗತಾಯ ಚಿರತೆ ಸೆರೆ ಹಿಡಿಯಲೇಬೇಕೆಂದು ಅರಣ್ಯ ಸಿಬ್ಬಂದಿ ಪಣತೊಟ್ಟು ಫೀಲ್ಡ್ ಗೆ ಇಳಿದಿದ್ದು ಇವತ್ತು ಸಂಜೆಯೊಳಗಾಗಿ ರಿಸಲ್ಟ್ ಸಿಗುವ ಸಾಧ್ಯತೆಗಳು ಹೆಚ್ವು..