Breaking News

ಗುರೂಜಿ ಭೇಟಿಯಾಗಲು ತಮಿಳುನಾಡಿಗೆ ಹೊರಟಿದ್ದ,.ನಡು ರಸ್ತೆಯಲ್ಲೇ ಹತ್ಯೆಯಾದ…!!

ಆರೋಪಿ ವಿಠ್ಠಲ ಸಾಂಬ್ರೇಕರ (32)

ಬೆಳಗಾವಿ- ಗದಗಯ್ಯ ಹಿರೇಮಠ ಮತ್ತು ವಿಠ್ಠಲ ಸಾಂಬ್ರೇಕರ ಇಬ್ಬರೂ ಆಪ್ತಮಿತ್ರರು,ವಿಠ್ಠಲ ಗದಗಯ್ಯನಿಗೆ ಎರಡು ಲಕ್ಷ ರೂ ಸಾಲ ಕೊಡ್ಟಿದ್ದ ಗದಗಯ್ಯ ಸಾಲಪಡೆದು ವಿಠ್ಠಲನಿಗೆ ಮರಳಿ ಕೊಡದ ಕಾರಣ,ವಿಠ್ಢಲ, ಗದಗಯ್ಯನ ರುಂಡ ಕತ್ತರಿಸಿ ಆಪ್ತಗೆಳೆಯನ ಮರ್ಡರ್ ಮಾಡಿದ,ಇದು ನಿನ್ನೆ ಹಲಗಾ ಗ್ರಾಮದ ಬಳಿ ನಡೆದ ಮರ್ಡರ್ ಕಹಾನಿ…

ಗದಗಯ್ಯ ಹಿರೇಮಠ 40 ಶಿಂಧೊಳ್ಳಿ ಗ್ರಾಮದವನು,ಈತ ಪಂಚಾಂಗ ಹೇಳುವ ಸ್ವಾಮೀಜಿ,ನಿನ್ನೆ ಆತ ಸುವರ್ಣಸೌಧದ ಎದುರು ನಿಂತು,ಹುಬ್ಬಳ್ಳಿಗೆ ಹೋಗಿ,ಅಲ್ಲಿಂದ ಗುರೂಜಿ ಭೇಟಿಯಾಗಲು ಚೆನ್ನಾಯಿಗೆ ಹೊರಟಿದ್ದ,ಈ ವಿಚಾರವನ್ನು ಗದಗಯ್ಯ ಗೆಳೆಯ ವಿಠ್ಠಲನಿಗೆ ಹೇಳಿದ,ಈ ಸಂಧರ್ಭದಲ್ಲಿ ಇಬ್ಬರೂ ಕೊಂಡಸಕೊಪ್ಪ ಗ್ರಾಮದಲ್ಲಿದ್ದರು,ಗದಗಯ್ಯ ,ಮತ್ತು ವಿಠ್ಠಲ ಇಬ್ಬರೂ ಬೈಕ್ ಮೇಲೆ ಸುವರ್ಣಸೌದದತ್ತ ಹೊರಟಿದ್ದರು,ದಾರಿಯಲ್ಲಿ ಬೈಕ್ ಬಂದ್ ಬಿತ್ತು,ಬೈಕ್ ಮೇಲೆ ಹಿಂದೆಯೇ ಕುಳಿತಿದ್ದ ವಿಠ್ಠಲ, ಗದಗಯ್ಯನ ಮೇಲೆ ಹರಿತವಾದ ಆಯುಧದಿಂದ ಗದಗಯ್ಯನ ರುಂಡ ಕತ್ತರಿಸಿ ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡ ಹಿರೇಬಾಗೇವಾಡಿ ಪೋಲೀಸರು ಕೆಲವೇ ಗಂಟೆಗಳಲ್ಲಿ ಮರ್ಡರ್ ಪ್ರಕರಣವನ್ನು ಅತ್ಯಂತ ಫಾಸ್ಟ್ ಆಗಿ ತನಿಖೆ ಮಾಡಿ,ಹಂತಕ ವಿಠ್ಠಲ ಸಾಂಬ್ರೇಕರ (32) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಠ್ಢಲ ಸಾಂಬ್ರೇಕರ ಗೆಳೆಯ ಗದಗಯ್ಯ ಹಿರೇಮಠಗೆ ಎರಡು ಲಕ್ಷ ಸಾಲ ಕೊಟ್ಟಿದ್ದ,ಗದಗಯ್ಯ ಅದನ್ನು ಮರಳಿಸಲಿಲ್ಲ,ಈ ವ್ಯವಾರ ಕೊನೆಗೂ ಕೊಲೆಯಲ್ಲಿ ಅಂತ್ಯವಾಗಿದ್ದು ಆಪ್ತಮಿತ್ರ ರ ಈ ಮರ್ಡರ್ ಕಹಾನಿ ಶಿಂಧೊಳ್ಳಿ ಹಾಗೂ ಕೊಂಡಸಕೊಪ್ಪ ಗ್ರಾಮಗಳನ್ನು ಬೆಚ್ಚಿಬೀಳಿಸಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *