ಬೆಳಗಾವಿ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಹಿರೇಬಾಗೇವಾಡಿ ಯಿಂದ ಹಿಡಿದು ಹತ್ತರಗಿ ಟೋಲ್ ನಾಕಾದವರೆಗೂ ಹೈವೇ ಮೂಲಕ ಹೋಗು ಲಾರಿಗಳ ಮೇಲೆ ರೇಡ್ ಮಾಡಿ,ಆಕ್ರಮ ಅಕ್ಕಿ ಸಾಗಾಣಿಕೆ ಜಾಲಕ್ಕೆ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂ ಲೂಟಿ ಮಾಡುವ ಹೊಸ ದಂಧೆ ಬೆಳಗಾವಿ ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ನಡೆಯುತ್ತಿದೆ.ಪೋಲೀಸ್ರು ಮಾಡುವ ಕೆಲಸವನ್ನು ಪತ್ರಕರ್ತರ ಸೋಗಿನಲ್ಲಿ ಕೆಲವು ಖದೀಮರು ಮಾಡುತ್ತಿದ್ದಾರೆ.ಈ ವಿಚಾರ ಪೋಲೀಸರ ವರ್ಚಸ್ಸಿಗೆ ಧಕ್ಕೆ ತರಬಾರ್ದು,ಪೋಲೀಸ್ರು ನಕಲಿ ಪತ್ರಕರ್ತರಿಂದ ನಡೆಯುವ ಈ ರೇಡ್ ದಂಧೆಯನ್ನು ತಡೆಯಬೇಕು..
ಲಾರಿ ಚಾಲಕನಿಗೆ ಪಡಿತರ ಸಾಗಾಟದ ಹೆದರಿಕೆ ಹಾಕಿ, ಹಣದ ಬೇಡಿಕೆ ಇಟ್ಟಿದ್ದ ನಾಲ್ವರು ನಕಲಿ ಪತ್ರಕರ್ತರ ಬಂಧನ
ಬೆಳಗಾವಿ, ಆ, 27 : ಲಾರಿಯೊಂದರ ಚಾಲಕನಿಗೆ ನಾವು ಪತ್ರಕರ್ತರು ಎಂದು ಹೆದರಿಸಿ ಆತನ ಮೇಲೆ ಹಲ್ಲೆ ಮಾಡಿ ಅವಾಚವಾಗಿ ನಿಂದಿಸಿ ಹಣದ ಬೇಡಿಕೆ ಇಟ್ಟಿದ್ದ ನಾಲ್ವರು ನಕಲಿ ಪತ್ರಕರ್ತರನ್ನು ಬಂಧಿಸುವಲ್ಲಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಬಂಧಿತರಲ್ಲಿ ಕಿರಣ ಕೃಷ್ಣಾ ಗಾಯಕವಾಡ, ಸಚೀನ ಭೀಮಪ್ಪ ಕಾಂಬಳೆ, ಸಂತೋಷ ಮನೋಹರ ದೊಡ್ಡಮನಿ, ದಾದು ವಿಶ್ವನಾಥ ಲೋಕಂಡೆ ಈ ನಾಲ್ವರು ಬಂಧಿತರಾಗಿದ್ದಾರೆ. ಇವರು ಗುರುರಾಜ್ ಶಿವಾನಂದ ಹುಕ್ಕೇರಿ ಸಾ. ನದಿಗುಡಿಕೇತ್ರ ಎಂಬ ಚಾಲಕ ತನ್ನ ಅಶೋಕ ಲೈಲ್ಯಾಂಡ್ ಲಾರಿ ನಂಬರ್ ಕೆಎ 22 ಡಿ 0557 ಇದರಲ್ಲಿ ಜೋಳದ ಪಿಡ್ಸ್ ಲೋಡ್ ಮಾಡಿಕೊಂಡು ಕೊನ್ನೂರಿನಿಂದ ಹೆಬ್ಬಾಳಕ್ಕೆ ಹೊರಟಾಗ ಟಾಟಾ ಇಂಡಿಗೋ ಕಾರ್ ನಂಬರ್ ಎಂಎಚ್ 08 ಆರ್ 1641 ಇದರಲ್ಲಿಂದ ಇದ್ದ ನಾಲ್ಕು ಜನ ಬಂದು ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿ ನಾವು ಪತ್ರಕರ್ತರು ಇರುತ್ತೇವೆ ನಿಮ್ಮ ಗಾಡಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದೀರಿ ಹೆದರಿಕೆ ಹಾಕಿದ್ದರು.
ಈ ಕುರಿತು ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ ಠಾಣೆಯಲ್ಲಿ ಪಿ.ಎಸ್ ಅಪರಾಧ ಸಂಖ್ಯೆ 226/ 22 ಇದರಲ್ಲಿ ನಮೂದ ಮಾಡಿದ ಲಾರಿ ಚಾಲಕನನ್ನು ಎಳೆದಾಡಿ ಅವ್ಯಾಚವಾಗಿ ನಿಂದಿಸಿ ಹಣ ಕೊಡಬೇಕು ಕೊಡದಿದ್ದರೆ ಫುಡ್ ಇನ್ಸ್ಪೆಕ್ಟರ್‍ಗೆ ಮತ್ತು ಪೆÇಲೀಸರಿಗೆ ತಿಳಿಸಿ ನಿಮ್ಮ ಲಾರಿಯನ್ನು ಜಪ್ತ ಮಾಡಿಸುತ್ತೇವೆ ಅಂತ ಹೆದರಿಕೆ ಹಾಕಿದ್ದು U/S 506,341,384,34,506 IPಅ ರಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಮಕನಮರಡಿ ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಅಭಿನಂಧಿಸಿದ್ದಾರೆ.