ಬೆಳಗಾವಿ- ಇವತ್ತು ಭಾನುವಾರ ರಜಾದಿನ ಹೀಗಾಗಿ, ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಹಿಡಿಯವ ಕಾರ್ಯಚರಣೆ ನಿಧಾನ ಗತಿಯಲ್ಲಿ ಸಾಗಿತ್ತು,ಅರಣ್ಯ ಇಲಾಖೆಯ ಅಧಿಕಾರಿಗಳು ರಿಲ್ಯಾಕ್ಸ್ ಮೂಡ್ ನಲ್ಲಿ ಇರುವಾಗಲೇ ಗಾಲ್ಫ್ ಗೇಟ್ ನಲ್ಲಿ ದೊಡ್ಡ ರಾದ್ದಾಂತವೇ ನಡೆಯಿತು.
ಇಂದು ಬೆಳಗ್ಗೆ ಏಳೆಂಟು ಜನ ಮಹಿಳೆಯರು ದೊಣ್ಣೆ ಹಿಡಿದುಕೊಂಡು ಗಾಲ್ಫ್ ಮೈದಾನಕ್ಕೆ ಬಂದ್ರು,ನಿಮ್ಮಿಂದ ಚಿರತೆ ಹಿಡಿಯಲು ಸಾಧ್ಯವಿಲ್ಲ,ಚಿರತೆ ನಾವು ಹಿಡಿಯುತ್ತೇವೆ.ನಮಗೆ ಒಳಗೆ ಬಿಡಿ ಅಂತಾ ಈ ಮಹಿಳೆಯರು ಗಾಲ್ಫ್ ಗೇಟ್ ನಲ್ಲಿ ಅವಾಜ್ ಹಾಕಿದ್ರು..
ಬೆಳಗಾವಿಯಲ್ಲಿ ಇಷ್ಟೆಲ್ಲಾ ಚಿರತೆ ರಾದ್ದಾಂತ ನಡೆದ್ರೂ ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ,ಅವರಿಂದ ಚಿರತೆ ಹಿಡಿಯಲು ಸಾಧ್ಯವೇ ಇಲ್ಲ.ನಮ್ಮನ್ನು ಒಳಗೆ ಬಿಡಿ ಅಂತಾ ಗಾಲ್ಫ್ ಗೇಟ್ ಹತ್ತಿ ಗಲಾಟೆ ಶುರು ಮಾಡಿದ್ರು,ಅಲ್ಲಿದ್ದ ಅರಣ್ಯ ಅಧಿಕಾರಿಗಳು ವೀರ ಮಹಿಳೆಯರನ್ನು ಸಮಾಧಾನಪಡಿಸಿದ್ರು.
ಮಾದ್ಯಮಗಳಿಗೆ ಹೇಳಿಕೆ ಕೊಟ್ಡ ಪ್ರತಿಭಟನಾಕಾರರು,ಬೆಳಗಾವಿಯ ಅರಣ್ಯ ಇಲಾಖೆಗೆ ಚಿರತೆ ಹಿಡಿಯುವ ಸಾಮರ್ಥ್ಯ ಇಲ್ಲ.ನಮ್ಮ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸುವ ತಾಕತ್ತು ಯರಿಗೂ ಇಲ್ಲ.ಅಂತಾ ಶಾಯರಿ ಹೇಳಿದ ಕಾಂಗ್ರೆಸ್ ನಾಯಕಿ ಆಯಿಶಾ ಸನದಿ ಚೀರಾಡಿ,ಕೂಗಾಡಿ,ಸಚಿವ ಉಮೇಶ್ ಕತ್ತಿ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ,ಎಲ್ಲರ ಗಮನ ಸೆಳೆದ್ರು..