Breaking News

ಬೆಳಗಾವಿಯಲ್ಲಿ, ಖೋಟಾ ನೋಟು ಚಲಾವಣೆಗೆ ಯತ್ನ, ಮೂವರ ಅರೆಸ್ಟ್…

ಬೆಳಗಾವಿಯ ಬಾರ್ ನಲ್ಲಿ ನಕಲಿ ನೋಟು ಚಲಾವಣೆಗೆ ಯತ್ನ,ಮೂವರ ಅರೆಸ್ಟ್…

ಬೆಳಗಾವಿ-ಐದನೂರು ಮುಖಬೆಲೆಯ

ನಕಲಿ ನೋಟು ಮುದ್ರಿಸಿ ಚಲಾವಣೆಗೆ ಯತ್ನಿಸಿದ, ಮೂವರು ಆರೋಪಿಗಳನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ‌ಜಿಲ್ಲೆ ಮೂಡಲಗಿ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಘಟನೆ ನಡೆದಿದೆ.ರಾಯಚೂರು ಜಿಲ್ಲೆಯ ಸಿಂಧನೂರು ಮೂಲದ ಕಿರಣ್‌ಕುಮಾರ ರಂಗರೇಜ್,ಕೊಪ್ಪಳ ಜಿಲ್ಲೆಯ ಕಾರಟಗಿ ಮೂಲದ ಸಾಗರ ನಿರಂಜನ್,ಉಡುಪಿ ಜಿಲ್ಲೆಯ ಕೊಲ್ಲೂರು ಮೂಲದ ಶಶಿಧರ ಶೆಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ.

ಬಾರ್‌ನಲ್ಲಿ ನಕಲಿ ನೋಟು ಚಲಾವಣೆಗೆ ಮುಂದಾಗಿದ್ದ ಆರೋಪಿತರು,ಬಾರ್‌ಗಳಲ್ಲಿ ಡಲ್ ಲೈಟ್ ಇರುವ ಕಾರಣಕ್ಕೆ ಸಮಯ ಸಾಧಿಸಲು ಆರೋಪಿತರ ಯತ್ನಿಸಿದ್ದರು‌.ನಕಲಿ ನೋಟು ‌ಎಂದು ಖಚಿತವಾಗ್ತಿದ್ದಂತೆ ಬಾರ್ ಸಿಬ್ಬಂದಿಯಿಂದ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ,500 ಮುಖಬೆಲೆಯ 473 ನಕಲಿ ನೋಟುಗಳನ್ನು ಪೋಲೀಸರು ಜಪ್ತಿ ಮಾಡಿದ್ದಾರೆ.

ಚಿಲ್ಡ್ರನ್ ‌ಬ್ಯಾಂಕ್ ಆಫ್ ಇಂಡಿಯಾ ಹೆಸರಲ್ಲಿ ನೋಟುಗಳ ಮುದ್ರಣ ಮಾಡಲಾಗಿತ್ತು.ಘಟಪ್ರಭಾ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *