ಬೆಳಗಾವಿಯ ಚಿರತೆ ಪತ್ತೆಗೆ ಅಂತಿಮ ಕಾರ್ಯಚರಣೆ…
ಬೆಳಗಾವಿ-ಕಳೆದ ಮೂರು ದಿನಗಳ ಹಿಂದೆ ಬೆಳಗಾವಿ ನಗರದ ಮಂಡೊಳ್ಳಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆ, ಗಾಲ್ಫ್ ಮೈದಾನದಿಂದ ನಾಪತ್ತೆಯಾಗಿತ್ತು, ಈ ಚಿರತೆ ಗಾಲ್ಫ್ ಮೈದಾನದಲ್ಲಿ ಇದೆಯೋ ಇಲ್ಲವೋ ಎನ್ನುವದನ್ನು ಖಾತ್ರಿ ಪಡಿಸಿಕೊಳ್ಳಲು ಅರಣ್ಯ ಇಲಾಖೆ ಇಂದು ಬೆಳಗ್ಗೆ ನೂರಾರು ಸಿಬ್ಬಂಧಿಗಳನ್ನು ಸೇರಿಸಿ ಪೋಲೀಸ್ ಇಲಾಖೆಯ ಜೊತೆ ಅಂತಿಮ ಜಂಟಿ ಕಾರ್ಯಾಚರಣೆ ನಡೆಸಿತು.
ಎಂದಿನಂತೆ ಚಿರತೆ ಅರಣ್ಯ ಇಲಾಖೆಯ ಸಿಬ್ಬಂಧಿಯ ಕಣ್ಣಿಗೆ ಬಿದ್ದಿಲ್ಲ. ಹೀಗಾಗಿ ಮೂರು ದಿನಗಳ ಹಿಂದೆ ಮಂಡೊಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಮರಳಿ ಕಾಡಿಗೆ ಹೋಗಿರಬಹುದು ಎನ್ನುವದು ಅರಣ್ಯ ಇಲಾಖೆಯ ಅಂದಾಜು.
ಸೆಪ್ಟೆಂಬರ್ ತಂಗಳಲ್ಲಿ ಚಿರತೆ ಸೆಕ್ಸ್ ಮಾಡುವ ಅವಧಿ,ಚಿರತೆ ವರ್ಷಕ್ಕೊಮ್ಮೆ ಸೆಕ್ಸ್ ಮಾಡುತ್ತದೆ ಅನ್ನೋದು ತಜ್ಞರ ಅಭಿಪ್ರಾಯ, ಹೆಣ್ಣು ಚಿರತೆ ಹುಡುಕುತ್ತ ಈ ಚಿರತೆ ಕಾಡಿಗೆ ಮರಳಿದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಕಳೆದ ಒಂದು ತಿಂಗಳಿನಿಂದ ಕಾಟ ಕೊಡುತ್ತಿರುವ ಚಿರತೆ,ಮರಳಿ ಕಾಡಿಗೆ ಹೋಗಿರಬಹುದು ಅಂತಾ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವಯಂ ಘೋಷಣೆ ಮಾಡಿಕೊಂಡಂತೆ ಕಾಣಿಸುತ್ತಿದೆ.ಹೀಗಾಗಿ ಇವತ್ತು ಬೆಳಗ್ಗೆ ಚಿರತೆ ಪತ್ತೆಗೆ ಮತ್ತೊಮ್ಮೆ ಕಾರ್ಯಾಚರಣೆ ನಡೆಸಿದೆ.