ಬೆಳಗಾವಿ- ತೀವ್ರ ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ಅವರು ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದು,ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ನಾಳೆ ಬೆಳಗ್ಗೆ 7-00 ಗಂಟೆಗೆ ಬೆಳಗಾವಿಗೆ ತರಲಾಗುತ್ತಿದೆ.
ಇಂದು ಬುಧವಾರ ಬೆಳಗ್ಗೆ 7-00 ಗಂಟೆಗೆ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ತರಲಾಗುತ್ತಿದೆ. ಸಾಂಬ್ರಾ ವಿಮಾನ ನಿಲ್ಧಾಣದಿಂದ ಅವರ ಪಾರ್ಥೀವ ಶರೀರವನ್ನು ಬೆಳಗಾವಿ ನಗರದ ಶಿವಬಸವ ನಗರದ ಅವರ ನಿವಾಸಕ್ಕೆ ತರಲಾಗುತ್ತದೆ.ಶಿವಬಸವ ನಗರದ ನಿವಾಸದ ಎದುರು ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗುತ್ತಿದೆ.ಉಮೇಶ್ ಕತ್ತಿ ಅವರ ಪಾರ್ಥೀವ ಶರೀರವನ್ನು ಶಿವ ಬಸವ ನಗರದ ನಿವಾಸಕ್ಕೆ ತರುವ ನಿರ್ಧಾರ ಯಾವುದೇ ಕ್ಷಣದಲ್ಲಿ ರದ್ದಾಗುವ ಸಾಧ್ಯತೆ ಇದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಇಂದು ಬೆಳಗ್ಗೆ 7-30 ಕ್ಕೆ ಪಾರ್ಥಿವ ಶರೀರ ತಲುಪಲಿದ್ದು ನೇರವಾಗಿ ಸಂಕೇಶ್ವರಕ್ಕೆ ತರಲಾಗುತ್ತದೆ. ಇಂದು ಬುಧವಾರ ಮದ್ಯಾಹ್ನ 2-00 ಗಂಟೆಯವರೆಗೆ ಸಂಕೇಶ್ವರದ ಹೀರಾ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ನಂತರ ಸಂಜೆ 5-00 ಗಂಟೆಗೆ ಹುಕ್ಕೇರಿಯ ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ನಡೆಯಲಿದೆ.