Breaking News

ಬೆಳಗಾವಿಯಲ್ಲಿ ಮರಾಠಿ ಬಾಯ್ಸ್ ಬಿಡುಗಡೆಗೆ ಬ್ರೇಕ್…!!!

ಬೆಳಗಾವಿ-ಗಡಿ ವಿವಾದ ಕೆದಕಿದ ಮರಾಠಿ ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮರಾಠಿ ಬಾಯ್ಸ್ ಮರಾಠಿ ಚಲನಚಿತ್ರ ಬಿಡುಗಡೆಗೆ ಬೆಳಗಾವಿಯಲ್ಲಿ ಬ್ರೇಕ್ ಬಿದ್ದಿದೆ.

ಬೆಳಗಾವಿ ಜಿಲ್ಲೆ ಸೇರಿ ರಾಜ್ಯಾದ್ಯಂತ ಮರಾಠಿ ಚಲನಚಿತ್ರ ‘ಬಾಯ್ಸ್ 03′ ಚಿತ್ರ ಇವತ್ತು ಬಿಡುಗಡೆಯಾಗಲಿದ್ದು,ಈ ಚಿತ್ರ ನಿಷೇಧಕ್ಕೆ ಕರವೇ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಚಿತ್ರ ಬಿಡುಗಡೆಗೆ ಬ್ರೇಕ್ ಬಿದ್ದಿದೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಕರವೇ ಮನವಿ ಅರ್ಪಿಸಿ ಬೆಳಗಾವಿಯಲ್ಲಿ ಮರಾಠಿ ಬಾಯ್ಸ್ ಚಿತ್ರ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ ಹಿನ್ನಲೆಯಲ್ಲಿ ಚಿತ್ರ ಬಿಡುಗಡೆಯಾಗುವದು ಅನಿಶ್ಚಿತವಾಗಿದೆ.ಇಂದು ಮಹಾರಾಷ್ಟ್ರ ಸೇರಿ ವಿವಿಧೆಡೆ ಬಿಡುಗಡೆ ಆಗುತ್ತಿರುವ ಬಾಯ್ಸ್ 3 ಮರಾಠಿ ಚಿತ್ರ ಬೆಳಗಾವಿಯಲ್ಲಿ ತೆರೆ ಕಾಣುತ್ತಿಲ್ಲ.

ಕರ್ನಾಟಕ ಪೊಲೀಸರಿಗೆ, ಕನ್ನಡ ಭಾಷೆಗೆ ಅಪಮಾನವಾಗುವ ರೀತಿ ಚಿತ್ರದಲ್ಲಿ ಡೈಲಾಗ್ ಗಳಿವೆ.
ಚಿತ್ರದ ಟ್ರೇಲರ್‌‌ನಲ್ಲಿರುವ ದೃಶ್ಯ ನೋಡಿದ ಕನ್ನಡಿಗರು ಕೆಂಡಾಮಂಡಲವಾಗಿದ್ದು,ಇದೇ ದೃಶ್ಯ ಕಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಮರಾಠಿ ಭಾಷಿಕ ಪುಂಡರು ಪುಂಡಾಟಿಕೆ ನಡೆಸಿದ್ದಾರೆ.
ಚಿತ್ರದಲ್ಲಿ ಕರ್ನಾಟಕದ ಪೊಲೀಸ್ ಠಾಣೆಗೆ ಆಗಮಿಸಿದ ದೃಶ್ಯದಲ್ಲಿ ವಿವಾದಿತ ಡೈಲಾಗ್ ಇದೆ.ಈ ದೃಶ್ಯದಲ್ಲಿ ಮರಾಠಿ ಮಾತನಾಡಬೇಡಿ, ಕನ್ನಡ ಇಲ್ಲ ಇಂಗ್ಲಿಷ್ ಮಾತನಾಡಿ ಎನ್ನುವ ಅಧಿಕಾರಿಗೆ, ಪ್ರತಿಯಾಗಿ ಚಿತ್ರದಲ್ಲಿ ಇರುವ ಒಂದು ಡೈಲಾಗ್‌ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ನಿಮಗೆ ನಿಮ್ಮ ಕನ್ನಡ ಭಾಷೆ ಮೇಲೆ ಅಭಿಮಾನವಿದ್ದರೆ,ನಮಗೂ ನಮ್ಮ ಮರಾಠಿ ಭಾಷೆ ಮೇಲೆ ಅಭಿಮಾನವಿದೆ.ಅಷ್ಟಕ್ಕೂ ಮರಾಠಿ ಭಾಷೆ ಅಭಿಮಾನ ಬೆಳಗಾವಿಯಲ್ಲಿ ತೋರಿಸದಿದ್ರೆ ಮತ್ತೆಲ್ಲಿ ತೋರಿಸಬೇಕು’ ಎಂಬ ಡೈಲಾಗ್ ಇದೆ.ವಿವಾದಾತ್ಮಕ ಡೈಲಾಗ್ ಇರುವ ಚಿತ್ರದ ಬಿಡುಗಡೆಗೆ ಕರವೇ ತೀವ್ರ ವಿರೋಧ ವ್ಯಕ್ತಪಡಿಸಿದೆ.ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಮರಾಠಿ ಪುಂಡರು ಪುಂಡಾಟಿಕೆ ನಡೆಸಿದ್ದಾರೆ.

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *