Breaking News

ಒಂದಲ್ಲ,ಎರಡಲ್ಲ,ಬರೊಬ್ಬರಿ ಎಂಟು ಚಿರತೆಗಳು ಸುದ್ದಿಯಲ್ಲಿ…!!

ನೈರುತ್ಯ ಆಫ್ರಿಕಾದ ನಮೀಬಿಯಾ ದೇಶದಿಂದ ಇಂದು ಶನಿವಾರ ವಿಶೇಷ ವಿಮಾನದಲ್ಲಿ ಕರೆತರಲಾದ ಚೀತಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೊರಗೆ ಕಾಡಿಗೆ ಬಿಟ್ಟಿದ್ದಾರೆ.

ಕುನೋ ಉದ್ಯಾನವನದಲ್ಲಿ 8 ಚೀತಾಗಳನ್ನು ಹೊರಗೆ ಬಿಟ್ಟ ನಂತರ ಪ್ರಧಾನ ಮಂತ್ರಿಗಳು ತಮ್ಮ ಕ್ಯಾಮರಾದಲ್ಲಿ ಅವುಗಳು ಅಡ್ಡಾಡುವುದನ್ನು ಸೆರೆಹಿಡಿದು ಸಂಭ್ರಮಿಸಿದ್ದಾರೆ.

ಈ ಮೂಲಕ ನಮೀಬಿಯಾದ 5 ಹೆಣ್ಣು ಮತ್ತು 3 ಗಂಡು ಚೀತಾಗಳು ಸರಿಸುಮಾರು 7 ದಶಕಗಳ ನಂತರ ಭಾರತಕ್ಕೆ ಮರುಪರಿಚಯವಾಗುತ್ತಿದೆ. ಕುನೋ ಪಾರ್ಕ್ ನಲ್ಲಿ ಚೀತಾಗಳಿಗೆ ವಿಶೇಷ ಆರೈಕೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 3 ತಿಂಗಳ ಕಾಲ ತೀವ್ರ ನಿಗಾದಲ್ಲಿ ಇರಿಸಲಾಗುತ್ತದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆಯೇ ಎಂದು ನೋಡಲಾಗುತ್ತದೆ.

ಭಾರತದ ವನ್ಯಜೀವಿ ರಕ್ಷಣೆಯಲ್ಲಿ ಸರ್ಕಾರದ ಹೊಸ ಪ್ರಯತ್ನ ಇದಾಗಿದ್ದು, ಚೀತಾಗಳು ಭಾರತಕ್ಕೆ ಹೊಂದಿಕೊಂಡರೆ ಮುಂದಿನ ಜನಾಂಗಕ್ಕೆ ಚೀತಾಗಳನ್ನು ನೋಡಲು ಅನುಕೂಲವಾಗುತ್ತದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *