Breaking News

ನೋಡಿದ್ದು ಕೇವಲ ಮೂವತ್ತು ನಿಮಿಷ,ಕೊಟ್ಟಿದ್ದು ನಾಲ್ಕು ಲಕ್ಷ ‌‌….!!!

ಬೆಳಗಾವಿ-ಬೆಳಗಾವಿ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಂತರ್ ರಾಜ್ಯ ಫುಟ್ ಬಾಲ್ ಟೂರ್ನಾಮೆಂಟ್ ಕುಂದಾನಗರಿಯಲ್ಲಿ ನಡೆಯಿತು.ಗೋವಾ,ಮುಂಬೈ ಹೈದ್ರಾಬಾದ್ ಸೇರಿದಂತೆ ವಿವಿಧ ರಾಜ್ಯಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ಫುಟ್ ಬಾಲ್ ಟೂರ್ನಾಮೆಂಟನ್ನು ನಗರಸೇವಕ ಅಜೀಂ ಪಟವೇಗಾರ ಅವರು ಆಯೋಜಿಸಿದ್ದರು,ಇದಕ್ಕೆ ನಗರ ಸೇವಕರಾದ ಇಮ್ರಾನ್ ಫತೇಖಾನ್,ಬಾಬಾಜಾನ್ ಮತವಾಲೆ,ಮುಜಮ್ಮಿಲ್ ಡೋಣಿ,ರಿಯಾಜ ಕಿಲ್ಲೇದಾರ್,ಉದ್ಯಮಿ ರಪೀಕ್ ಗೋಕಾಕ್,ಅಸ್ಲಂ,ಹಾಗೂ ಮಾಜಿ ನಗರ ಸೇವಕ ಮತೀನ್ ಅಲಿ ಶೇಕ್ ಅವರು ತನುಮನಧನದಿಂದ ಸಪೋರ್ಟ್ ಮಾಡಿದ್ದರು.

ಕಾಂಗ್ರೆಸ್ ಮುಖಂಡ ಅನೀಲ ಪೋತದಾರ,ಮೃನಾಲ ಹೆಬ್ಬಾಳಕರ,ಶಾಸಕ ಅನೀಲ ಬೆನಕೆ,ಬಿಜೆಪಿ ಮುಖಂಡ ಡಾ.ರವಿ ಪಾಟೀಲ ಸೇರಿದಂತೆ ಹಲವಾರು ಜನನಾಯಕರು ಟೂರ್ನಾಮೆಂಟ್ ಗೆ ಸಹಕಾರ ನೀಡಿದ್ದರಿಂದ ಇದು ಯಶಸ್ಸು ಆಯಿತು.

ನಿನ್ನೆ ಭಾನುವಾರ ರಾತ್ರಿ ಮುಂಬೈ- ಗೋವಾ ನಡುವೆ ಫೈನಲ್ ಪಂದ್ಯ ನಡೆದಿತ್ತು,ಈ ಪಂದ್ಯವನ್ನು ಕೆಪಿಸಿಸಿ ಕಾರ್ಯಾಧ್ಯ ಸತೀಶ್ ಜಾರಕಿಹೊಳಿ ವೀಕ್ಷಣೆಗೆ ಬಂದಿದ್ದರು, ಕೇವಲ ಮೂವತ್ತು ನಿಮಿಷಗಳ ಕಾಲ ಅವರು ಫೈನಲ್ ಪಂದ್ಯವನ್ನು ವೀಕ್ಷಿಸಿ ಪಂದ್ಯಾವಳಿಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನಾಲ್ಕು ಲಕ್ಷ ರೂ ದೇಣಿಗೆ ನೀಡುವದಾಗಿ ಘೋಷಣೆ ಮಾಡಿದ ಸತೀಶ್ ಜಾರಕಿಹೊಳಿ ಎಲ್ಲರ ಗಮನ ಸೇಳೆದ್ರು.

ಫೈನಲ್ ಪಂದ್ಯದಲ್ಲಿ ಗೋವಾ ತಂಡ ಜಯಬೇರಿ ಭಾರಿಸಿತು,ಟ್ರೋಪಿಯ ಜೊತೆಗೆ ಒಂದು ಲಕ್ಷ ಹನ್ನೊಂದು ಸಾವಿರದ ಒಂದ ನೂರ ಹನ್ನೊಂದು ರೂ ನಗರದು ಬಹುಮಾನ ಪಡೆಯಿತು,ಎರಡನೇಯ ಸ್ಥಾನ ಪಡೆದ ಮುಂಬಯಿ ತಂಡ 50 ಸಾವಿರದ ಐನೂರಾ ಐವತ್ತೈದು ರೂಪಾಯಿ ಬಹುಮಾನ ಮತ್ತು ಟ್ರೋಪಿ ಪಡೆಯಿತು.ಪಂದ್ಯಾವಳಿಯಲ್ಲಿ ಹದಿನೈದಕ್ಕೂ ಹೆಚ್ವು ತಂಡಗಳು ಭಾಗವಹಿಸಿದ್ದವು, ಪ್ರತಿಯೊಂದು ತಂಡ, ಹತ್ತು ಸಾವಿರ ರೂ ಪ್ರವೇಶ ಫೀ ಪಾವತಿಸಿತ್ತು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *