ಬೆಳಗಾವಿ-ಎತ್ತುಗಳ ಮೈ ತೊಳೆಯಲು ಹೋದಾಗ ಕಾಲು ಜಾರಿ ಕೆರೆಗೆ ಬಿದ್ದು ರೈತನೊಬ್ಬ ಸಾವನ್ನೊಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದ ಮಲ್ಲಪ್ಪ ಅನವಾಳ (45) ಮೃತ ದುರ್ದೈವಿಯಾಗಿದ್ದಾನೆ.ಇಂದು ಬೆಳಗ್ಗೆ ಎತ್ತುಗಳ ಮೈ ತೊಳೆಯಲು ಕೆರೆಗೆ ಹೋಗಿದ್ದ ಮಲ್ಲಪ್ಪ,ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ.
ಸ್ಥಳದಲ್ಲಿದ್ದವರಿಗೂ ಈಜು ಬಾರದ ಕಾರಣಕ್ಕೆ ಈತನ ರಕ್ಷಣೆ ಸಾಧ್ಯವಾಗಿಲ್ಲ.ತಕ್ಷಣವೇ ಗ್ರಾಮಸ್ಥರಿಗೆ ಮಾಹಿತಿ ರವಾನೆಯಾಗಿ, ಕೆರೆಯತ್ತ ಸ್ಥಳೀಯರ ದೌಡಾಯಿಸುವಷ್ಟರಲ್ಲಿ ರೈತ ಮೃತಪಟ್ಟಿದ್ದ,ಕೆರೆಗೆ ಹಾರಿ ಸ್ಥಳೀಯರು ಮೃತದೇಹ ಹೊರಗೆ ತೆಗೆದಿದ್ದಾರೆ.ರಾಮದುರ್ಗ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ