ಮಗುವನ್ನು ಕಳುವು ಮಾಡಿದ ಆರೋಪದ ಮೇಲೆ,ಮಾಯಾ ಕಾಂಬಳೆ .ಮಹಾರಾಷ್ಟ್ರದ ಮೈಶಾಳ ಮೂಲದ ಮಹಿಳೆ
ಅಥಣಿ-ನರ್ಸ್ ವೇಷದಲ್ಲಿ ಬಂದು ಮಗು ಅಪಹರಿಸಿದ ಚಾಲಾಕಿ ಕಳ್ಳಿಯನ್ನು ಪೋಲೀಸ್ರು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ಕಳುವಾದ ಮಗುವನ್ನು ರಕ್ಷಣೆ ಮಾಡಿದ್ದಾರೆ.
ನರ್ಸ್ ವೇಷದಲ್ಲಿ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ,ತೂಕ ಮಾಡಿಸಿಕೊಂಡು ಬರುವದಾಗಿ ಗಂಡು ಮಗು ಕಳ್ಳತನ ಮಾಡಲಾಗಿತ್ತು.ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಈ ಘಟನೆ ನಡೆದಿತ್ತು.ಅಂಬಿಕಾ ಅಮೀತ ಭೋವಿ ಅವರ ಗಂಡು ಮಗು ಕಳ್ಳತನವಾಗಿತ್ತು.ನಿನ್ನೆ ರಾತ್ರಿ ಹನ್ನೊಂದು ಗಂಟೆಗೆ ಜನಿಸಿದ್ದ ನವಜಾತ ಶಿಶು ಇಂದು ಬೆಳಗ್ಗೆ ಕಳುವಾಗಿತ್ತು.ಬೆಳಗಿನ ಜಾವ ತಾಯಿ ಬಳಿ ಬಂದು ನಿಮಗೆ ಹಣ ಬಂದಿದೆ ಆಧಾರ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಅಂಟೇಂಡರನ್ನ ಬೇರೆಡೆಗೆ ಕಳಿಸಿ ಮಗು ಅಪಹರಣ ಮಾಡಲಾಗಿತ್ತು.ಅಂಟೇಂಡರ್ ಬೇರೆಡೆಗೆ ಹೋದಾಗ ಮಗುವಿನ ತೂಕ ಮಾಡಿಸಬೇಕು ಎಂದು ನವಜಾತ ಮಗುವನ್ನು ತೆಗೆದುಕೊಂಡ ಹೋದ ಕಳ್ಳಿ ಈಗ ಪೋಲೀಸರ ವಶದಲ್ಲಿದ್ದಾಳೆ.ನರ್ಸ್ ವೇಷದಲ್ಲಿ ಬಂದಿರುವ ಹಿನ್ನಲೆ ಆಸ್ಪತ್ರೆ ಸಿಬ್ಬಂದಿ ಎಂದು ನಂಬಿ ಮಗುವನ್ನು ನೀಡಿದ್ದ ತಾಯಿ ಅರ್ದ ಗಂಟೆಯಾದರೂ ಮಗುವನ್ನು ನರ್ಸ್ ತಂದು ಕೊಡಲಿಲ್ಲ ಎಂದು ವಿಚಾರಿಸಿದಾಗ ಮಗು ಕಳುವಾದ ವಿಚಾರ ಬಯಲಾಗಿತ್ತು.ಚಾಲಾಕಿ ಕಳ್ಳಿಯ ಚಲನವಲನ ಆಸ್ಪತ್ರೆ ಸಿಸಿಟಿವಿಯಲ್ಲಿ ಸೇರೆಯಾಗಿತ್ತು.ಸ್ಥಳಕ್ಕೆ ಅಥಣಿ ಪೊಲೀಸರ ಭೇಟಿ ನೀಡಿ ಸಿಸಿ ಟಿವ್ಹಿ ದೃಶ್ಯಾವಳಿ ಗಳನ್ನು ಆಧರಿಸಿ ಮಗು ಕಳ್ಳಿಯನ್ನು ಬೆನ್ನಟ್ಟಿ,ಕಳ್ಳಿಯನ್ನು ಅರೆಸ್ಟ್ ಮಾಡಿದ್ದಾರೆ. ಚಾಲಾಕಿ ಕಳ್ಳಿ ಈಗ ಪೋಲೀಸರ ವಶದಲ್ಲಿದ್ದು,ಮಗುವನ್ನು ರಕ್ಷಿಸುವಲ್ಲಿ ಅಥಣಿ ಪೋಲಿಸರು ಯಶಸ್ವಿಯಾಗಿದ್ದಾರೆ.