ಬೆಳಗಾವಿ- ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಲಿಂಗನಮಠ ಗ್ರಾಮಸ್ಥರು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕೊಠಡಿಗಳ ನಿರ್ಮಾಣಕ್ಕಾಗಿ ಆಗ್ರಹಿಸಿ,ಇಂದು ಬೆಳಗ್ಗೆ ಏಕಾಏಕಿ ಬೀದಿಗಿಳಿದು ಹೋರಾಟ ಶುರು ಮಾಡಿದ್ದಾರೆ.
ಉರ್ದು ಶಾಲೆಗೆ ಕೊಠಡಿಗಳು ಮಂಜೂರಾಗಿವೆ.ಕನ್ನಡ ಶಾಲೆಯ ಮಕ್ಕಳು ಶಾಲೆಯ ಕಟ್ಟೆಯ ಮೇಲೆ ಪಾಠ ಕೇಳುವ ಪರಿಸ್ಥಿತಿ ಇದೆ.ಶಾಲಾ ಕೊಠಡಿಗಳ ಮಂಜೂರಾತಿ ವಿಚಾರದಲ್ಲಿ ಕನ್ನಡ ಶಾಲೆಯ ಮಕ್ಕಳಿಗೆ ಅನ್ಯಾಯವಾಗಿದೆ.ಎಂದು ಆರೋಪಿಸಿ ಗ್ರಾಮಸ್ಥರು ಲಿಂಗನಮಠ ಗ್ರಾಮದಲ್ಲಿ ಪ್ರತಿಭಟಿಸುತ್ತಿದ್ದಾರೆ.
ಲಿಂಗನಮಠ ಗ್ರಾಮದಲ್ಲಿ, ಪ್ರಾಥಮಿಕ ಶಾಲೆಯಲ್ಲಿ ಐದು ಕೋಣೆಗಳಿವೆ, ಆದರೆ ಏಳು ತರಗತಿಗಳಿವೆ,ನಾಲ್ಕು ತರಗತಿಗಳ ಮಕ್ಕಳು ಶಾಲಾ ಕೋಣೆಯಲ್ಲಿ ಪಾಠ ಕಲಿಯುತ್ತಿದ್ದಾರೆ.ಮೂರು ತರಗತಿಗಳ ಮಕ್ಕಳು ಹಲವಾರು ವರ್ಷಗಳಿಂದ ಶಾಲೆಯ ಕಟ್ಟೆಯ ಮೇಲೆ ಕಲಿಯುತ್ತಿದ್ದಾರೆ.ಆದರೂ ಶಾಲೆಗೆ ಕೊಠಡಿಗಳು ಮಂಜೂರು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗನಮಠ ಗ್ರಾಮದಲ್ಕಿ ಉರ್ದು ಶಾಲೆಗೆ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ.ಆದ್ರೆ ಕನ್ನಡ ಶಾಲೆಗೆ ಏಕಿಲ್ಲ.ಎಂದು ಮಕ್ಕಳ ಪಾಲಕರು ಪ್ರಶ್ನೆ ಮಾಡುತ್ತಿದ್ದು.ಕನ್ನಡ ಶಾಲೆಯ ಉಳಿವಿಗಾಗಿ ಜಿಲ್ಲಾಡಳಿತ ಕೂಡಲೇ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿ,ರಸ್ತೆ ತಡೆ ನಡೆಸಿ ಪ್ರತಿಭಟಿಸುತ್ತಿದ್ದಾರೆ.
ಡಾ.ಸರ್ನೋಬತ್ ಬೆಂಬಲ
ಲಿಂಗನಮಠ ಗ್ರಾಮಸ್ಥರು ಕನ್ನಡ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು,ಈ ಹೋರಾಟಕ್ಕೆ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ಬೆಂಬಲ ವ್ಯಕ್ತಪಡಿಸಿದ್ದು,ಈ ವಿಚಾರವನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವದಾಗಿ ತಿಳಿಸಿದ್ದಾರೆ