ಬೆಳಗಾವಿ- ಕಾಲಕ್ಕೆ ತಕ್ಕಂತೆ ವ್ಯವಸ್ಥೆ ಬದಲಾಗುತ್ತಿದೆ.ಜೈಲಿನಲ್ಲಿರುವ ಕೈದಿಗಳೂ ಈಗ ಹೈಟೆಕ್ ಆಗಿದ್ದಾರೆ.ಕೊಲೆ ಪ್ರಕರಣದ ಆರೋಪಿಯಾಗಿರುವ ಪುರಸಭೆ ಸದಸ್ಯನೊಬ್ಬ ವಿಡಿಯೋ ಕಾನ್ಫರೆನ್ಸ್ ಮೂಲಕ,ಪುರಸಭೆಯ ಸಾನಾನ್ಯ ಸಭೆಯಲ್ಲಿ ಭಾಗಹಿಸಿ,ತನ್ನ ವಾರ್ಡಿನ ಸಮಸ್ಯೆಗಳನ್ನು ಹೇಳಿಕೊಂಡ ಪ್ರಸಂಗ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಕೊಲೆ ಆರೋಪಿದಡಿ ಜೈಲಿನಲ್ಲಿರುವ ಆರೋಪಿ ಒರ್ವ ವಿಡಿಯೋ ಕಾಲ್ ಮೂಲಕ ಸಾಮಾನ್ಯ ಸಭೆಗೆ ಹಾಜರಾಗಿ ತನ್ನ ವಾರ್ಡ್ ಕುರಿತು ಸಭೆಯಲ್ಲಿ ಚರ್ಚೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ .
ಸಂಕೇಶ್ವರ ಪುರಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ವಿಡಿಯೋ ಕಾಲ್ ಮೂಲಕ ಕೊಲೆ ಆರೋಪದಡಿ ಬೆಳಗಾವಿ ಹಿಂಡಲಗಾ ಕಾರ್ಯಗೃಹದಲ್ಲಿರುವ ಸಂಕೇಶ್ವರ ಪುರಸಭೆಯ 14ನೇ ವಾರ್ಡಿನ ಬಿಜೆಪಿ ಸದಸ್ಯ ಉಮೇಶ ಕಾಂಬಳೆ ಕೋರ್ಟ್ ಪರವಾನಿಗೆ ಪಡೆದು ಸಾಮಾನ್ಯ ಸಭೆಗೆ ವಿಡಿಯೋ ಕಾಲ್ ಮೂಲಕ ಹಾಜರಾಗಿದ್ದಾನೆ .
ಪುರಸಭೆ ಸದಸ್ಯನಾಗಿರುವ ಉಮೇಶ ಕಾಂಬಳೆ ಕಳೆದ ಎಂಟು ತಿಂಗಳ ಹಿಂದೆ ಸಂಕೇಶ್ವರ ಪಟ್ಟಣದ ಮಹಿಳೆಯೊರ್ವಳಿಗೆ ಕಂಟ್ರಿ ಪಿಸ್ತೂಲ್ ಬಳಸಿ ಗುಂಡಿಕ್ಕಿ ಕೊಲೆ ಮಾಡಿರುವ ಪ್ರಕರಣದಲ್ಲಿ ಬಂಧನಗಲಕೊಳ್ಳಗಾಗಿದ್ದು,ಪುರಸಭೆ ಸಾಮಾನ್ಯ ಸಭೆಗೆ ಹಾಜರಾಗಿದ್ದಾನೆ.
ಕೊಲೆ ಆರೋಪದಡಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಉಮೇಶ ಕಾಂಬಳೆ ಜೈಲಿನಿಂದ ವಿಡಿಯೋ ಕಾಲ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದಾನೆ .ನ್ಯಾಯಾಲಯದ ಅನುಮತಿ ಮೇರೆಗೆ ಸಭೆಗೆ ವಿಡಿಯೋ ಕಾಲ್ ಮೂಲಕ ಹಾಜರಾದ ಆರೋಪಿ ಉಮೇಶ ಕಾಂಬಳೆ ಸಭೆಯಲಿ ತನ್ನ ವಾರ್ಡ್ ಕೆಲಸಗಳು ಆಗುತ್ತಿಲ್ಲ ಎಂದು ತನ್ನ ವಾರ್ಡ್ ಬಗ್ಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾನೆ.