ಬೆಳಗಾವಿ – ಮನೆಯ ಹಿತ್ತಲಲ್ಲಿದ್ದ ಬಾವಿಯಿಂದ ನೀರು ತೆಗೆಯಲು ಹೋಗಿ,ಕಾಲು ಜಾರಿ ಬಾವಿಗೆ ಬಿದ್ದು ಆತ ಸಾವನ್ನೊಪ್ಪಿ ಮೂರು ದಿನ ಕಳೆದರೂ ಮನೆಯವರಿಗೆ ಈ ವಿಚಾರ ಗೊತ್ತಾಗಿರಲಿಲ್ಲ.
ಬೆಳಗಾವಿ ನಗರದ ಪಾಂಗುಳ ಗಲ್ಲಿಯ ನಿವಾಸಿ ಸಂಜಯ ಪಾಟೀಲ 42 ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.ಮೃತ ಸಂಜಯ ಪಾಟೀಲ ವಿಪರೀತವಾಗಿ ಕುಡಿಯುತ್ತಿದ್ದ,ಆಗಾಗ್ಗೆ ಕುಡಿದು ಎರಡು,ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಮನೆಯವರು ಕಾಯಿಪಲ್ಲೆ ಮಾರಾಟ ಮಾಡಲು ಬೆಳಿಗ್ಗೆ ಹೋದ್ರೆ ಸಂಜೆ ಬರುತ್ತಾರೆ ಹೀಗಾಗಿ ಮನೆಯ ಹಿತ್ತಲಲ್ಲ ಆತ ಬಾವಿಗೆ ಬಿದ್ದು ಸತ್ತರೂ ಆತನ ಕುಟುಂಬಸ್ಥರಿಗೆ ಈ ವಿಚಾರ ಗೊತ್ತಾಗಿಲ್ಲ.
ಮೂರು ದಿನದ ಬಳಿಕ ಇಂದು ಬೆಳಗ್ಗೆ ಪಕ್ಕದ ಮನೆಯ ಮಹಿಳೆಯೊಬ್ಬಳು ನೀರು ತರಲು ಬಾವಿಗೆ ಹೋದಾಗ ಬಾವಿಯಲ್ಲಿ ಶವ ತೆಲಾಡುತ್ತಿರುವದನ್ನು ನೋಡಿದ ಬಳಿಕ ಈ ವಿಷಯ ಎಲ್ಲರಿಗೂ ಗೊತ್ತಾಗಿದೆ.ಮಾ
ರ್ಕೆಟ್ ಠಾಣೆಯ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ