Breaking News

ಬೆಳಗಾವಿಯಲ್ಲಿ ಒಂದೇ ದಿನ ಇಬ್ಬರು,ಧರ್ಮಗುರುಗಳ ಜಯಂತಿ…..!!!

ಬೆಳಗಾವಿ: ಗಣೇಶೋತ್ಸವ ಹಬ್ಬವನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿ ಸೈ ಎನಿಸಿಕೊಂಡಿದ್ದ ಬೆಳಗಾವಿ ಪೊಲೀಸರಿಗೆ ಈಗ ಮತ್ತೊಂದು ಸವಾಲು ಎದುರಾಗಿದೆ.

ಎರಡು ಹಬ್ಬಗಳು ಒಂದೇ ದಿನ ಬಂದಿದ್ದು, ಅದು ಮುಸ್ಲಿಂ ಹಾಗೂ ಹಿಂದುಗಳ ಆಚರಣೆ ಒಂದೇ ದಿನ ಇರುವುದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.

ಹೌದು, ಅಕ್ಟೋಬರ್ 9 ಮಹತ್ವದ ದಿನವಾಗಿದ್ದು, ಈ ಬಾರಿ ಮುಸ್ಲಿಮರ ಪವಿತ್ರ ಹಬ್ಬ ಈದ್ ಮಿಲಾದ್, ಹಾಗೂ ವಾಲ್ಮೀಕಿ ಜನಾಂಗದವರು ವಿಜೃಂಭಣೆಯಿಂದ ಆಚರಿಸಲ್ಪಡುವ ವಾಲ್ಮೀಕಿ ಜಯಂತಿ‌ ಎರಡು ಹಬ್ಬಗಳು ಒಂದೇ ದಿನದಂದು ಬಂದಿವೆ.ಎರಡು ವರ್ಷಗಳ ಲಾಕ್ ಡೌನ್ ಕಾರಣದಿಂದ ಮುಸ್ಲಿಮರು ಈದ್ ಮಿಲಾದ್ ಸಂಭ್ರಮದಿಂದ ವಂಚಿತರಾಗಿದ್ದರೆ, ವಾಲ್ಕೀಕಿ ಸಮಾಜದವರು ತಮ್ಮ ಕುಲಗುರು ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗದೆ ಅಸಹಾಯಕರಾಗಿದ್ದರು.ಎರಡು ವರ್ಷಗಳ ಬಳಿಕ ಈ ಬಾರಿ ಅದ್ದೂರಿ ಆಚರಣೆಗೆ ಎರಡು ಸಮುದಾಯಗಳು ಉತ್ಸುಕವಾಗಿವೆ.

ಶಾಂತಿ- ಸುವ್ಯವಸ್ಥೆಯ ಸವಾಲು:

ಈದ್ ಮಿಲಾದ್, ಹಾಗೂ ವಾಲ್ಮೀಕಿ ಜಯಂತಿಗಳಂದು ಎರಡು ಸಮುದಾಯಗಳು ಭವ್ಯ ಮೆರವಣಿಗೆ ನಡೆಸಲಿದ್ದು, ಈ ಮೆರವಣಿಗೆ ಮಾರ್ಗವೂ ಒಂದೇ ಆಗಿರುವ ಕಾರಣ ಪೊಲೀಸರಿಗೆ ತಲೆಬಿಸಿ ಹೆಚ್ಚಿಸಿದೆ.ವಾಲ್ಕೀಕಿ ಜಯಂತಿಯಂದು ಆ ಸಮುದಾಯದವರು ನಗರದಲ್ಲಿ ವಾದ್ಯ ವೈಭವಗಳೊಂದಿಗೆ ಭವ್ಯ ಮೆರವಣಿಗೆ ನಡೆಸುತ್ತಾರೆ.
ಈದ್ ಮಿಲಾದ್ ಮುಸ್ಲಿಮ್ ಸಮುದಾಯದವರ ದೊಡ್ಡ ಆಚರಣೆ ಆಗಿದ್ದು, ಆ ದಿನ ಸಮುದಾಯದವರೂ ಭವ್ಯ ಮೆರವಣಿಗೆ ಹಮ್ಮಿಕೊಳ್ಳುತ್ತಾರೆ.

ಈಗ ಚುನಾವಣೆ ವರ್ಷ ಆಗಿರುವ ಕಾರಣ ರಾಜಕೀಯ ನಾಯಕರು ಈ ಎರಡು ಸಮುದಾಯದ ಜನರನ್ನು ಒಲಿಸಿಕೊಳ್ಳಲು ಪೈಪೊಟಿಗೆ ಬಿದ್ದವರಂತೆ ಆಚರಣೆಗೆ ತನುಮನಧನದ ಸಹಾಯ ಮಾಡಲು ತುದಿಗಾಲಲ್ಲಿ ನಿಂತಿದ್ದು, ಇದು ಆಚರಣೆಯ ದಿಕ್ಕು ಬದಲಿಸುವ ಸಾಧ್ಯತೆ ಇದೆ.ಒಂದು ಸಮುದಾಯದ ಹಬ್ಬಕ್ಕೆ ಸೂಕ್ತ ಬಂದೋಬಸ್ತ್ ನೀಡಲು ಪೊಲೀಸರು ಸಾಕಷ್ಟು ಹರಸಾಹಸ ನಡೆಸುತ್ತಾರೆ. ಆದರೆ, ಈಗ ಎರಡು ಹಬ್ಬಗಳು ಒಂದೇ ಒಟ್ಟಿಗೆ ಬಂದಿರುವುದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮುಂದಿನ ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಎರಡೂ ಸಮುದಾಯದ ಯುವಕರನ್ನು ಓಲೈಸಲು ಭರ್ಜರಿ ಪ್ಯಾಕೇಜ್ ಕೊಡುತ್ತಿದ್ದಾರೆ. ಈದ್ ಮಿಲಾದ್ ಹಬ್ಬದ ಅಂಗವಾಗಿ ಈಗಿನಿಂದಲೇ ನಗರದಲ್ಲಿ ಬಣ್ಣ ಬಣ್ಣದ ದೀಪಾಲಂಕಾರಕ್ಕೆ ಭರ್ಜರಿ ತಯಾರಿ ನಡೆದಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *