ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದ ಉಪ ಕುಲಪತಿ ಸ್ಥಾನಕ್ಕೆ ಸರ್ಚ್ ಕಮೀಟಿ ಒಟ್ಟು ಮೂರು ಜನರನ್ನು ಅರ್ಹಗೊಳಿಸಿದೆ.
NIT goa ಡೈರೆಕ್ಟರ್ ಗೋಪಾಲ ಮುರುಗರೆ,ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಉಪ ಕುಲಪತಿ ವಿದ್ಯಾಶಂಕರ,ಬೆಳಗಾವಿಯ ವಿಟಿಯ ರಜಿಸ್ಟ್ರಾರ್ ಆನಂದ ದೇಶಪಾಂಡೆ ಅವರನ್ನು ಸರ್ಚ್ ಕಮೀಟಿ ಆಯ್ಕೆ ಮಾಡಿದ್ದು ಮೂವರಲ್ಲಿ ಒಬ್ಬರು ನಾಳೆ ಅಥವಾ ನಾಡಿದ್ದು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.
ಆನಂದ ದೇಶಪಾಂಡೆ ಹಾಗೂ ವಿದ್ಯಾಶಂಕರ ನಡುವೆ ಪೈಪೋಟಿ ನಡೆದಿದ್ದು, ವಿದ್ಯಾಶಂಕರ ಅವರು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರ ಸಂಭಂಧಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು ಬಹುತೇಕ ವಿದ್ಯಾಶಂಕರ ಅವರೇ ವಿಟಿಯು ವಿಸಿ ಆಗುವ ಎಲ್ಲ ಸಾಧ್ಯತೆಗಳಿವೆ.