ಬೆಳಗಾವಿ-ಬೆಳಗಾವಿ ನಗರದಲ್ಲಿ ಕ್ಯಾಂಪ್ ಮೂಲದ ಯುವಕನಿಗೆ ಅನಂತಶಯನ ಗಲ್ಲಿ ಹತ್ತಿರ ಚೂರಿ ಇರಿತವಾಗಿದ್ದು ಯುವಕ ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಳಗಾವಿ ನಗರದ ಅಂಬಾ ಭವನ ಹತ್ತಿರ ಬೈಕ್ ಮೇಲೆ ಮೂರು ಜನ ಯುವಕರು ಹೋಗುತ್ತಿರುವಾಗ, ಹತ್ತು ಜನ ಯುವಕರ ಗುಂಪು ಬೈಕ್ ಸವಾರರನ್ನು ತಡೆದು ಫರಾನ್ ಧಾರವಾಡಕರ ಎಂಬ 15 ವರ್ಷದ ಯುವಕನ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಫರಾನ್ ಧಾರವಾಡಕರ ಜೊತೆ ತೆರಳುತ್ತಿದ್ದ ಇಬ್ಬರು ಯುವಕರು ತಪ್ಪಿಸಿಕೊಂಡು ಮನೆ ತಲುಪಿದ್ದಾರೆ.ಸುಮಾರು ಹತ್ತರಿಂದ ಹದಿನೈದು ಜನರ ಯುವಕರ ಗುಂಪೊಂದು ಅನಂತಶಯನ ಗಲ್ಲಿ ಹತ್ತಿರ ಅಟ್ಯಾಕ್ ಮಾಡಿದ್ದು ಫರಾನ್ ಒಬ್ಬನೇ ಸಿಕ್ಕಿಬಿದ್ದು ಹಲ್ಲೆಗೊಳಗಾಗಿದ್ದು ಈತನ ಜೊತೆಗಿದ್ದ ಇಬ್ಬರು ಯುವಕರು ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ.
ಹಲ್ಲೆಗೆ ಕಾರಣ ಏನು ತಿಳಿದು ಬಂದಿಲ್ಲ.ಹಲ್ಲೆ ಮಾಡಿವದರು ಯಾರು ಅನ್ನೋದು ಇನ್ನುವರೆಗೆ ಗೊತ್ತಾಗಿಲ್ಲ,ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಫರಾನ್ ಈಗ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜಿಲ್ಲಾ ಆಸ್ಪತ್ರೆಗೆ ಪೋಲೀಸರು ದೌಡಾಯಿಸಿದ್ದು, ಘಟನೆಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಚೂರಿ ಇರಿತದಿಂದ ಗಾಯಗೊಂಡಿರುವ ಫರಾನ್ ಧಾರವಾಡಕರ ಇಸ್ಲಾಮೀಯಾ ಶಾಲೆಯ ಹತ್ತನೆಯ ತರಗತಿಯ ವಿಧ್ಯಾರ್ಥಿ ಎಂದು ತಿಳಿದು ಬಂದಿದೆ.
ಹಿರಿಯ ಪೋಲೀಸ್ ಅಧಿಕಾರಿಗಳು ಈಗ ಜಿಲ್ಲಾ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ