Breaking News

ಬೆಳಗಾವಿಯಲ್ಲಿ, ಬಾಲಕನ ರುಂಡ ಕತ್ತರಿಸಿದ ಕಿರಾತಕ ಸಿಕ್ಕಿಬಿದ್ದ….!

ಹನ್ನೊಂದು ವರ್ಷದ ಬಾಲಕನ ರುಂಡವಿಲ್ಲದ ಮೃತದೇಹ ಪತ್ತೆಯಾಗಿತ್ತು ಇದು ಯಾರ ಮೃತದೇಹ,ಈ ನೀಚ ಕೃತ್ಯವನ್ನು ಮಾಡಿದವರು ಯಾರು ಎಂದು ಪತ್ತೆ ಮಾಡುವುದು ಪೋಲೀಸರಗೆ ಸವಾಲಿನ ಕೆಲಸವಾಗಿತ್ತು, ಬಾಲಕನ ಕೈಗೆ ಸುತ್ತಿಕೊಂಡಿದ್ದ ಶಾಲೆಯ ಟೈ ಸುಳಿವು ಕೊಟ್ಟಿತ್ತು ಇದನ್ನು ಆಧರಿಸಿ ಪ್ರಕರಣದ ಬೆನ್ನಟ್ಟಿದ ಬೆಳಗಾವಿ ಜಿಲ್ಲೆಯ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹನ್ನೊಂದು ವರ್ಷದ ಬಾಲಕನನ್ನು ಹತ್ಯೆ ಮಾಡಿ,ರುಂಡವನ್ನು ಬೇರ್ಪಡಿಸಿ ಮೃತದೇಹವನ್ನು ಗೋಣಿ ಚೀಲದಲ್ಲಿ ಹಾಕಿ,ರುಂಡ,ಮತ್ತು ದೇಹವನ್ನು ಬೇರೆ,ಬೇರೆ ಸ್ಥಳಗಳಲ್ಲಿ ಸಾಗಿಸಿದ್ದ ಇಬ್ಬರು ನೀಚರನ್ನು ಪೋಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಬಾಲಕನ ಮೃತದೇಹ ಪತ್ತೆಯಾದ ಪ್ರದೇಶದಲ್ಲಿ ದ್ರೋಣ ಕ್ಯಾಮರಾದಿಂದ ಬಾಲಕ ಬಳಿಸುತ್ತಿದ್ದ ಸೈಕಲ್ ಸ್ಕೂಲ್ ಬ್ಯಾಗ ಸೇರಿದಂತೆ ಇತರ ಸಾಕ್ಷಾಧಾರಗಳನ್ನು ಪತ್ತೆ ಮಾಡಿರುವುದು ಈ ಪ್ರಕರಣದ ವಿಶೇಷ

ಬೆಳಗಾವಿ
ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಬಳಿ ಹಿರಣ್ಯಕೇಶಿ ನದಿಯ ಹಿನ್ನೀರಿನಲ್ಲಿ ಅಪರಿಚಿತ ಬಾಲಕನ ರುಂಡವಿಲ್ಲದ ಮುಂಡ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರುದ್ದೀನ ಕೊಣ್ಣೂರು ಮತ್ತು ಹನುಮಂತ ದೇವನೂರ ಬಂಧಿತ ಆರೋಪಿಗಳು. ನೂರುದ್ದೀನ ಬಾಲಕನ ರುಂಡ ಕತ್ತರಿಸಿ, ಶಾಲಾ ಸಮವಸ್ತ್ರವನ್ನು ಬಿಚ್ಚಿ ಬ್ಯಾಗ್ ಸಮೇತ ಕಿತ್ತುಕೊಂಡು ಹತ್ಯೆ ಮಾಡಿದ್ದಾನೆ. ಬಾಲಕನ ಸೈಕಲ್‌ನ್ನು ಬಾವಿಗೆ ಎಸೆದಿದ್ದಾನೆ.ಈ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ತನ್ನ ಸ್ನೇಹಿತ ಹನುಮಂತನ ಸಹಾಯ ಪಡೆದಿದ್ದ ಎಂದರು.
೧೦ರಿಂದ ೧೨ ವರ್ಷದ ಬಾಲಕನ ರುಂಡವಿಲ್ಲದ ಮೃತದೇಹ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪರಿಶೀಲಿಸಿದ ವೇಳೆ ಇದು ಕೊಲೆ ಪ್ರಕರಣ ಎಂಬುದು ಬೆಳಕಿಗೆ ಬಂದಿತು. ಇದೇ ವೇಳೆ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕನ ಕಾಣೆ ಪ್ರಕರಣಕ್ಕೆ ಇದು ಹೊಂದಾಣಿಕೆಯಾಗಿರುವುದು ಕಂಡುಬಂದಿತು. ಈ ಪ್ರಕರಣ ಬೇಧಿಸಲು ಎರಡು ಪ್ರತ್ಯೇಕ ಪೊಲೀಸರ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದ ವೇಳೆ ಬಾಲಕನನ್ನು ಹತ್ಯೆ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.
ಈ ಪ್ರಕರಣ ಬೇಧಿಸುವಲ್ಲಿ ಗೋಕಾಕ ಡಿವೈಎಸ್ಪಿ, ಸರ್ಕಲ್ ಇನ್ಸಪೆಕ್ಟರ್ ಮೊಹಮ್ಮದ ರಫೀಕ್ ತಹಸೀಲ್ದಾರ, ಹುಕ್ಕೇರಿ ಠಾಣೆ ಇನ್ಸಪೆಕ್ಟರ್ ರಮೇಶ ಛಾಯಾಗೋಳ, ಸಂಕೇಶ್ವರ ಠಾಣೆ ಇನ್ಸಪೆಕ್ಟರ್ ಪ್ರಹ್ಲಾದ ಚೆನ್ನಗಿರ ಮತ್ತು ತಂಡದ ಕಾರ್ಯವನ್ನು ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ ಮೊದಲಾದವರು ಉಪಸ್ಥಿತಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *