ಬೆಳಗಾವಿ:ಪ್ರತಿ ಟನ್ ಕಬ್ಬಿಗೆ ರೂ. ೫೫೫೦ ಬೆಲೆ ನಿಗದಿಗೊಳಿಸಿದ ಬಳಿಕವೇ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿರೈತರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಡಳಿತ , ಸಕ್ಕರೆ ಸಂಸ್ಥೆಯ ಆಯುಕ್ತರ ನೇತೃತ್ವದಲ್ಲಿಎಲ್ಲ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ರೈತ ಮುಖಂಡರ ಜೊತೆಗೆ ಸಭೆ ನಡೆಸಿ, ಕಬ್ಬಿನ ಬೆಲೆಯನ್ನು ನಿಗದಿಗೊಳಿಸಬೇಕು.ಬಳಿಕವಷ್ಟೇ ಕಾರ್ಖಾನೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದ ಆಗ್ರಹಿಸಿದರು.
ರೈತರ ಕಬ್ಬಿನಿಂದ ೧ ಟನ್‌ಗೆ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸುಮಾರು ರೂ. ೪೫೦೦ ಸಂದಾಯವಾಗುತ್ತದೆ.ಹಾಗಾಗಿ, ಪ್ರತಿ ಟನ್ ಕಬ್ಬಿಗೆ ರೂ. ೨೦೦೦ ರೈತರಿಗೆ ಸಹಾಯಧನವನ್ನು ಸರ್ಕಾರ ನೀಡಬೇಕು. ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ರೂ. ೩೫೦೦ ದರ ನೀಡಬೇಕು. ಹಲವಾರು ವರ್ಷಗಳಿಂದ ಕಬ್ಬಿನ ಬೆಲೆ ಏರಿಕೆಯಾಗಿಲ್ಲ. ಮತ್ತಿತರ ಬಯೋಪ್ರಾಡಕ್ಟ ತೈಲ ಮತ್ತು ಇತರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿವೆ. ಹೀಗಾಗಿ ನಮ್ಮ ಬದುಕು ಸಂಕಷ್ಟದ ಸುಳಿಯಲ್ಲಿ ಸಿಕ್ಕಿದೆ. ರೈತರ ಹಿತದೃಷ್ಟಿಯಿಂದ ಪ್ರತಿಟನ್ ಕಬ್ಬಿಗೆ ರೂ.೫೫೦೦ ನಿಗದಿಮಾಡಬೇಕು ಎಂದು ರೈತರು ಆಗ್ರಹಿಸಿದರು.
ವಿದ್ಯುತ್ ಖಾಸಗೀಕರಣ ನೀತಿ ಖಂಡನೀಯವಾಗಿದೆ. ಅತೀವೃಷ್ಟಿ, ಅನಾವೃಷ್ಟಿಯಿಂದ ೨೦೧೯ರಿಂದ ಸತತವಾಗಿ ರೈತರು ಮನೆಗಳು ಕಳೆದುಕೊಂಡಿದ್ದಾರೆ. ಬೆಳೆಗಳನ್ನು ಹಾನಿಗೀಡಾಗಿವೆ. ಆದರೆ, ಪರಿಹಾರ ಮಾತ್ರ ಮರೀಚಿಕೆಯಾಗಿದೆ.ರೈತ ವಿರೋಧಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ರಾಜ್ಯ ಉಪಾಧ್ಯಕ್ಷ ಶಿವಾನಂದ ಮುಗಳಿಹಾಳ, ಉತ್ತರ ಕರ್ನಾಟಕ ಗಣೇಶ ಇಳಿಗೇರಿ, ಮಲ್ಲಿಕಾರ್ಜುನ ರಾಮದುರ್ಗ ಮೊದಲಾದವರು ಪಾಲ್ಗೊಂಡಿದ್ದರು