Breaking News

ಚೇಂಜ್ ಮಾಡುವದಿಲ್ಲ ಚೇಂಜ್ ಯ್ಯಾಕ್ ಮಾಡ್ತೀರ್ರೀ…..!!

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಈಗಿನಿಂದಲೇ ಚುನಾವಣೆ ಶುರುವಾಗಿದೆ ಎನ್ನುವ ವಾತಾವರಣ ಬಿಜೆಪಿ,ಮತ್ತು ಕಾಂಗ್ರೆಸ್ ಎರಡರಲ್ಲೂ ಇತ್ತು, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಅವರು ನಿನ್ನೆ ಬೆಳಗಾವಿ ಉತ್ತರದ ಬಿಜೆಪಿ ಆಕಾಂಕ್ಷಿಗಳಿಗೆ ಸ್ಪಷ್ಟವಾದ ನಿಖರವಾದ ಉತ್ತರ ಕೊಡುವ ಮೂಲಕ ಶಾಸಕ ಅನೀಲ ಬೆನಕೆ ಅವರ ಹಾದಿ ಸುಗಮಗೊಳಿಸಿದ್ದಾರೆ.

ಬೆಳಗಾವಿ ಉತ್ತರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ ಅಲ್ಲ ಎಂದು ಮಾದ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಳೀನ ಕುಮಾರ್ , ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಅಂದ್ರೆ ಖುಷಿ ಮಾಡಬೇಕಲ್ರೀ..ನಾವು ಖುಷಿ ಮಾಡ್ತೀವಿ,ಅನೀಲ ಬೆನಕೆ ಅವರನ್ನು ಚೇಂಜ್ ಮಾಡುವದಿಲ್ಲ.ಚೇಂಜ್ ಯಾತಕ್ಕೆ ಮಾಡ್ತೀವಿ,ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಅಂದ್ರೆ,ಪಾರ್ಟಿ ಅಷ್ಟು ಗಟ್ಟಿಯಾಗಿದೆ ಅಂತಾ ಲೆಕ್ಕ,ಅಷ್ಟು ನಾಯಕರು ಸೃಷ್ಠಿಯಾಗಿದ್ದಾರೆ ಎನ್ನುವ ಖುಷಿ,ಆದ್ರೆ ಸಿಟ್ಟಿಂಗ್ ಎಂಎಲ್ಎ ಗಳನ್ನು ಚೇಂಜ್ ಮಾಡುವದಿಲ್ಲ ಅಂತಹ ಯೋಚನೆಗಳಿದ್ದರೆ ಮಾತ್ರ ಚೇಂಜ್ ಮಾಡ್ತೀವಿ ಆದ್ರೆ ಸದ್ಯಕ್ಕೆ ಅಂತಹ ಯೋಚನೆಗಳು ಇಲ್ಲ.ಎಂದು ಸ್ಪಷ್ಟವಾದ ನಿಖರವಾದ ಹೇಳಿಕೆ ನೀಡಿದ ನಳೀನಕುಮಾರ್ ಕಟೀಲು ಶಾಸಕ ಅನೀಲ ಬೆನಕೆ ಅವರನ್ನು ಬದಲಾಯಿಸಿ ಬೇರೆಯವರಿಗೆ ಟಿಕೆಟ್ ಕೊಡುವುದಿಲ್ಲ ಎನ್ನುವ ಸಂದೇಶ ನೀಡಿದ್ದಾರೆ.

ಬೆಳಗಾವಿ ಉತ್ತರದಲ್ಲಿ ಅನೀಲ ಬೆನಕೆ ಅವರನ್ನು ಕೈಬಿಡ್ತಾರೆ ಎನ್ನುವ ಸುದ್ಧಿ ವ್ಯವಸ್ಥಿತವಾಗಿ ಹರಡಿತ್ತು, ಅನೇಕ ಜನ ಬಿಜೆಪಿ ಆಕಾಂಕ್ಷಿಗಳು ಬೆಳಗಾವಿ ಉತ್ತರದ ಟಿಕೆಟ್ ಗಾಗಿ ಲಾಭಿ ಕೂಡಾ ನಡೆಸಿದ್ದರು.ಆದ್ರೆ ನಳೀನಕುಮಾರ ಕಟೀಲು ಅವರ ಹೇಳಿಕೆಯಿಂದಾಗಿ ಟಿಕೆಟ್ ಗಾಗಿ ನಡೆಯುತ್ತಿದ್ದ ಲಾಭಿಗೆ ಬ್ರೇಕ್ ಬಿದ್ದಿದೆ.

ಶಾಸಕ ಅನೀಲ ಬೆನಕೆ ಅವರನ್ನು ಬದಲಾಯಿಸಿದರೆ,ನಮಗೆ ಟಿಕೆಟ್ ಕೊಡಿ,ಎಂದು ಬಹಳಷ್ಟು ಜನ ಆಕಾಂಕ್ಷಿಗಳು ಕ್ಯುನಲ್ಲಿ ನಿಂತಿದ್ದರು.ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆಳಗಾವಿ ಉತ್ತರದಲ್ಲಿ ನಡೆಯುತ್ತಿದ್ದ ಎಲ್ಲ ಗೊಂದಲ ಗದ್ದಲಗಳಿಗೆ ಇತೀಶ್ರೀ ಹಾಡಿದೆ.

ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ, ಡಾ.ರವಿ ಪಾಟೀಲ,ಮುರುಘೇಂದ್ರ ಗೌಡ ಪಾಟೀಲ,ಮತ್ತು ವೀರೇಶ್ ಕಿವಡಸಣ್ಣವರ, ಸೇರಿದಂತೆ ಹಲವಾರು ಜನ ಆಕಾಂಕ್ಷಿಗಳು ಜಬರದಸ್ತ್ ಲಾಭಿ ನಡೆಸಿದ್ದರು.ಅನೀಲ ಬೆನಕೆ ಅವರನ್ನು ಬದಲಾಯಿಸಿದರೆ,ನಮಗೂ ಅವಕಾಶ ಕೊಡಿ ಎಂದು ಎಂ ಬಿ ಝಿರಲಿ ಮತ್ತು ಉಜ್ವಲಾ ಬಡವನ್ನಾಚೆ ಪಕ್ಷದ ಮುಖಂಡರ ಎದುರು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು.

ಅನೀಲ ಬೆನಕೆ ಅವರು ಹಾಲಿ ಶಾಸಕರು,ಜೊತೆಗೆ ಮರಾಠಾ ಸಮುದಾಯಕ್ಕೆ ಸೇರಿದವರು.ಅವರನ್ನು ಬದಲಾಯಿಸಿ ಬೇರೆಯವರಿಗೆ ಟಿಕೆಟ್ ಕೊಡ್ತಾರೆ ಎನ್ನುವ ವದಂತಿ ಹರಡಿತ್ತು.ಹೀಗಾಗಿ ಆಕಾಂಕ್ಷಿಗಳ ಸಂಖ್ಯೆ ಬೆಳಗಾವಿ ಉತ್ತರದಲ್ಲಿ ಹೆಚ್ಚಾಗುತ್ತಲೇ ಇತ್ತು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *