ಸವದತ್ತಿ-ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ,ಬೆಳಗಾವಿ ಜಿಲ್ಲೆ ಸವದತ್ತಿಯ ಶಾಂತಿನಗರ ಬಡಾವಣೆಯಲ್ಲಿ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ ಮಾಡಲಾಗಿದೆ.ಬಾಬು ಮಹಾದೇವಪ್ಪ ಪಾಸಲಕರ್ ಎಂಬುವವರ ಮನೆ ಕಳುವಾಗುದೆ.150 ಗ್ರಾಂ ಚಿನ್ನಾಭರಣ, 2 ಲಕ್ಷ ನಗದು ಸೇರಿ ಬೆಲೆಬಾಳುವ ವಸ್ತುಗಳನ್ನು ದೋಚಲಾಗಿದೆ.
ಕುಟುಂಬ ಸದಸ್ಯರ ಜೊತೆಗೆ ಸಂಬಂಧಿಕರ ಮನೆಗೆ ಹೋಗಿದ್ದ ಬಾಬು ಪಾಸಲಕರ ಅವರ ಮನೆಗೆ ನುಗ್ಗಿ
ತಡರಾತ್ರಿ ಚಿನ್ನ, ಹಣ ದೋಚಿ ಪರಾರಿಯಾಗಿದ್ದಾರೆ.ಮನೆಗಳ್ಳತನದಿಂದ ಬೆಚ್ಚಿಬಿದ್ದ ಶಾಂತಿನಗರ ಬಡಾವಣೆ ನಿವಾಸಿಗಳು.ಸವದತ್ತಿ ಠಾಣೆಗೆ ದೂರು ನೀಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ