ಬೆಳಗಾವಿ-ಮಾನವೀಯತೆ ಅನ್ನೋದು ಸತ್ತು ಹೋಗಿದೆ.ಅಧಿಕಾರಿಗಳಿಗೆ ದುಡ್ಡು ಕೊಡದಿದ್ರೆ ಯಾವದಕ್ಕೂ ಅನಕೂಲ ಮಾಡಿ ಕೊಡುವುದಿಲ್ಲ ಅನ್ನೋದು ಬೆಳಗಾವಿಯ ದಕ್ಷಿಣ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸಾಭೀತಾಗಿದೆ.
ದಕ್ಷಿಣ ಸಬ್ ರಿಜಿಸ್ಟರ್ ಕಚೇರಿಯ ನೋಂದಣಿ ಅಧಿಕಾರಿ,ಪದ್ಮನಾಭನ್ ಗುಡಿ ಅವರ ಕಚೇರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷದ ಅಜ್ಜಿಯನ್ನು ಬೆಡ್ ಸಮೇತ ಕರೆತಂದು ಆಸ್ತಿ ಹಂಚಿಕೆ ಹಕ್ಕುಪತ್ರಕ್ಕೆ ಹೆಬ್ಬಟ್ಟು ಒತ್ತಿಸಿದ ಅಮಾನವೀಯ ಘಟನೆ ನಡೆದಿದೆ.
80 ವರ್ಷದ ಅಜ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,ನಾವು ವೈದ್ಯರ ಪ್ರಮಾಣಪತ್ರ ಕೊಡುತ್ತೇವೆ,ಆಸ್ಪತ್ರೆಗೆ ಬಂದು ಆಸ್ತಿ ಹಂಚಿಕೆ ಹಕ್ಕು ಪತ್ರಕ್ಕೆ ಸಹಿ,ಜೊತೆಗೆ ಹೆಬ್ಬಟ್ಟು ಗುರುತನ್ನು ತೆಗೆದುಕೊಂಡು ಹೋಗಿ ಎಂದು ಅಜ್ಜಿಯ ಕುಟುಂಬಸ್ಥರು ರಿಜಿಸ್ಟರ್ ಪದ್ಮನಾಭನ್ ಗುಡಿ ಅವರಲ್ಲಿ ಮನವಿ ಮಾಡಿಕೊಂಡರೂ ಅದಕ್ಕೆ ಅವರು ಅವಕಾಶ ಕೊಡದೇ ಇರುವದರಿಂದ,ಕುಟುಂಬಸ್ಥರು ಅಜ್ಜಿಯನ್ನು ಆಸ್ಪತ್ರೆಯಿಂದ ಬೆಡ್ ಸಮೇತ ಕಚೇರಿಗೆ ಕರೆತಂದು ಸಹಿ ಮಾಡಿಸಿಕೊಂಡಿದ್ದಾರೆ. ಅಜ್ಜಿಯ ಹೆಸರು ಮಹಾದೇವಿ ಅಗಸಿಮನಿ.ವಯಸ್ಸು 80
ಬೆಳಗಾವಿಯ ದಕ್ಷಿಣ ವಿಭಾಗದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.ಆಸ್ತಿ ಆಶೆಗಾಗಿ ಕುಟುಂಬಸ್ಥರು ಈ ಕೃತ್ಯ ಮಾಡಿದ್ರೋ ಅಥವಾ, ಸಬ್ ರಿಜಿಸ್ಟರ್ ಅಧಿಕಾರಿ ಪದ್ಮನಾಭನ್ ಅವರ ಪ್ರಮಾದದಿಂದಾಗಿ ಈ ರೀತಿಯಿ ಅಮಾನವೀಯ ಘಟನೆ ನಡೆಯಿತೋ ಅನ್ನೋದು ತನಿಖೆ ಆಗಬೇಕು,ಮತ್ತೆ ಈ ರೀತಿಯ ಘಟನೆಗಳು ನಡೆಯದಂತೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕಾಗಿದೆ.