ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಓರ್ವ ವಾಹನ ಚಾಲಕ ಮೃತಪಟ್ಟಿದ್ದಾನೆ.
ಎರಡು ಕಾರ, ಟ್ರಕ್ ಹಾಗೂ 4 ಕ್ಕೂ ಹೆಚ್ಚು ಬೈಕ್ ಗಳ ಸರಣಿ ಅಪಘಾತ ಸಂಭವಿಸಿದೆ.ಮೊಲ್ಯಾಸೀಸ್ ತುಂಬಿದ್ದ ಟ್ಯಾಂಕರ್ ನಿಂದ ಮೊಲ್ಯಾಸೀಸ್ ಸೋರಿಕೆ ಹಿನ್ನಲೆ ಸರಣಿ ಅಪಘಾತ ಸಂಭವಿಸಿದ್ದು ಈ ಸರಣಿ ಅಪಘಾತಕ್ಕೆ ಓರ್ವ ಬಲಿಯಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ಘಟನೆ ನಡೆದಿದೆ.ಹೆದ್ದಾರಿಯಲ್ಲಿ ಮೊಲ್ಯಾಸೀಸ್ ಸೋರಿಕೆ ಹಿನ್ನಲೆ ವಾಹನಗಳು ಸ್ಕೀಡ್ ಆಗಿ ಸರಣಿಘಾತ ಸಂಭವಿಸಿದೆ.ಸರಣಿ ಅಪಘಾತದಲ್ಲಿ ಓರ್ವ ಲಾರಿ ಚಾಲಕನ ಸಾವನ್ನೊಪ್ಪಿದ್ದು ಹಲವಾರು ವಾಹನಗಳು ಜಖಂ ಆಗಿವೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ