ಬೆಳಗಾವಿ-ಮಳೆಯ ಅರ್ಭಟಕ್ಕೆ ಅತ್ಯಂತ ಹಳೇಯದಾದ ಮಣ್ಣಿನ ಮನೆಗಳು ದನದ ಕೊಟ್ಟಿಗೆಗಳು ಕುಸಿದು ಬೀಳುತ್ತಲೇ ಇದ್ದು ಈಗಾಗಲೇ ಹತ್ತು ಹಲವು ಜೀವಗಳು ಇದಕ್ಕೆ ಬಲಿಯಾಗಿವೆ.
ದನದಕೊಟ್ಟಿಗೆ ಕುಸಿದು ಬಿದ್ದು ಜೋಡೆತ್ತು ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.ಪ್ರಭು ನಗರದ ನಿವಾಸಿ ಸಾಬವ್ವ ಹುಡೇದಗೆ ಸೇರಿದ ಜೋಡೆತ್ತುಗಳು ಮೃತಪಟ್ಟಿವೆ.
ಕಳೆದ ರಾತ್ರಿ ಏಕಾಏಕಿ ದನದ ಕೊಟ್ಟಿಗೆ ಕುಸಿದು ಬಿದ್ದು ಘಟನೆ.
ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು, ಪೊಲೀಸರ ಭೇಟಿ ಪರಿಶೀಲನೆ.
ಎತ್ತುಗಳನ್ನ ವಿಶೇಷವಾಗಿ ಸಿಂಗರಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡ ಕುಟುಂಬ.
ಜೋಡೆತ್ತು ಸಾವು ಹಿನ್ನೆಲೆ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ