ಬೆಳಗಾವಿ-ಏಳುಕೊಳ್ಳದ ನಾಡುಯಲ್ಲಮ್ಮನಗುಡ್ಡದಲ್ಲಿ ಮಂಗಳವಾರ ಈ ಜೈಕಾರ ಮುಗಿಲು ಮುಟ್ಟಿತ್ತು. ಭಕ್ತಾಧಿಗಳು ಮಹಾನವಮಿ ಸಂಭ್ರಮದಲ್ಲಿ ಮಿಂದೆದ್ದಿದ್ದರು.
ನವರಾತ್ರಿ ಅಂಗವಾಗಿ ಯಲ್ಲಮ್ಮನ ದರ್ಸನಕ್ಕಾಗಿ ಅಮ್ಮನ ಸನ್ನಿಧಿಗೆ ಕರ್ನಾಟಕ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಸುಡು ಬಿಸಿಲಲ್ಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡರು.
ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಮಂಗಳವಾರ ಬೆಳಗ್ಗೆ ಆಯುಧ ಪೂಜೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಿ, ಭಕ್ತರು ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಲಕ್ಷಾಂತರ ಭಕ್ತರು ಸವದತ್ತಿಯ ಯಲ್ಲಮ್ಮದೇವಿಯ ಸನ್ನದಿಯಲ್ಲಿ ಜಮಾಯಿಸಿದ್ದು ಭಕ್ತರನ್ನು ನಿಯಂತ್ರಿಸಲು ಪೋಲೀಸರು ಪರದಾಡುತ್ತಿದ್ದಾರೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					
