ಬೆಳಗಾವಿ- ಚಲಿಸುತ್ತಿದ್ದ ಬೈಕ್ ಟಾಯರ್ ಪಂಕ್ಚರ್ ಆಗಿ,ನಿಯಂತ್ರಣ ತಪ್ಪಿ ಬೈಕ್ ಅಪಘಾತಕ್ಕೀಡಾಗಿ ಇಬ್ಬರು ಮೈತ ಪಟ್ಟರೆ ಇಬ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆ ನಿಪ್ಪಾಣಿ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಡೆದಿದೆ.ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದ ಇಪ್ಪತ್ತೈದು ವರ್ಷದ ಲಕ್ಷ್ಮೀ ಆನಂದ ಕೊಪ್ಪದ,ರಾಮದುರ್ಗ ತಾಲ್ಲೂಕಿನ ಕಟಕೋಳ ಗ್ರಾಮದ ಹದಿಮೂರು ವರ್ಷದ ಭಾಗ್ಯಶ್ರೀ ವಕಮಿ ಮೃತ ದುರ್ದೈವಿಗಳಾಗಿದ್ದಾರೆ.
ಬೈಕ್ ಚಲಾಯಿಸುತ್ತಿದ್ದ ಹಣಮಂತ ಸಕ್ರೀ,ಮತ್ತು ಮಾರುತಿ ರಮೇಶ್ ಚುನಾಮದಾರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ನಿಪ್ಪಾಣಿ ತಾಲ್ಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮಹಾನವಮಿಯ ದಿನ ಈ ಅಪಘಾತ ಸಂಭವಿಸಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ