ಹಿಂದಿನ ಸರ್ಕಾರ ಕೆಡವಿದ ರಮೇಶ ಜಾರಕಿಹೊಳಿಗೆ ಈ ಸರ್ಕಾರ ಕೆಡುವುದು ದೊಡ್ಡ ಮಾತಲ್ಲ.

ಬೆಳಗಾವಿ-ಮುಂದಿನ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಗೆ ರಮೇಶ ಜಾತಕಿಹೊಳಿ ನೇತೃತ್ವ ಎಂಬ ಕಟೀಲ್ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.ಯಡಿಯೂರಪ್ಪನವರಿಗೆ ಕೊಡ್ತಿಲ್ಲ, ಇನ್ನೂ ರಮೇಶ ಜಾರಕಿಹೊಳಿ ಯಾವ ಲೆಕ್ಕ? ಎಂದು ಸತೀಶ್ ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾದ್ಯಮಗಳ ಜೊತೆ ಮಾತನಾಡಿದ್ದು,ಪಕ್ಷ ಕಟ್ಟಿದ ಯಡಿಯೂರಪ್ಪನವರನ್ನೇ ಅವರನೇ ಸೈಡ್‌ಲೈನ್ ಮಾಡಿದ್ದಾರೆ.ಬಿಜೆಪಿ ನಾಯಕರು ರಮೇಶ ಜಾರಕಿಹೋಳಿ ಮೂಗಿಗೆ ತುಪ್ಪ ಸವರುವ ಕೆಲಸಮಾಡುತ್ತಿದ್ದಾರೆ.ಮಂತ್ರಿಗಾಗಿ ಕಾಯ್ದು ಕುಳಿತ ರಮೇಶ್ ಕಲ್ಲು ಎಸೆಯಬಾರದು ಅಂತಾ ಚಾಕಲೇಟ್ ತಿನ್ನಿಸುವ ಕೆಲಸ ಮಾಡುತ್ತಿದ್ದಾರೆ,ರಮೇಶ ಜಾರಕಿಹೊಳಿ ಸಿಟ್ಟಾದ್ರೆ ಏನಾದರೂ ಮಾಡಬಹುದು ಅನೋ ಭಯ ಬಿಜೆಪಿ ನಾಯಕರಿಗೆ ಇದೆ,ಹೀಗಾಗ ಮಂತ್ರಿ ಮಾಡುವ ಭರವಸೆ ನೀಡುತ್ತ ಕಾಲ ಕಳೆಯುತ್ತಿದ್ದಾರೆ ಎಂದು ಸತೀಶ್ ಟೀಕಿಸಿದರು.

ಹಿಂದಿನ ಸರ್ಕಾರ ಕೆಡವಿದ ರಮೇಶ ಜಾರಕಿಹೊಳಿಗೆ ಈ ಸರ್ಕಾರ ಕೆಡುವುದು ದೊಡ್ಡ ಮಾತಲ್ಲ,ಒಂದು ಭಾರಿ ಬೈಪಾಸ್ ಸರ್ಜರಿ ಮಾಡಿದವನಿಗೆ ಎರಡನೇ ಬೈಪಾಸ್ ಸರ್ಜರಿ ಮಾಡೊದು ದೊಡ್ಡ ಕೆಲಸವಲ್ಲ,ಹಾಗಾಗಿ ರಮೇಶ್ ಜಾರಕಿಹೊಳಿಗೆ ತಿಂಗಳಿಗೊಮ್ಮೆ ಚಾಕಲೇಟ್ ನೀಡುವ ಕೆಲಸ ಮಾಡ್ತಿದ್ದಾರೆ,ಸಿಎಂ ಈಗಾಗಲೇ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಮೂರು ಭಾರಿ ಮಾತನಾಡಿದ್ದಾರೆ.ಈಗ ಮತ್ತೆ ಈ ಕುರಿತಂತೆ ಬಿಜೆಪಿ ಹೈಕಮಾಂಡ್ ಭೇಟಿ ಗೆ ದೆಹಲಿಗೆ ಹೊರಟಿದ್ದಾರೆ.ಆದ್ರೆ ಬಿಜೆಪಿ ಹೈಕಮಾಂಡ್ ಗುಜರಾತ್ ಚುನಾವಣೆಯಲ್ಲಿ ಬ್ಯೂಸಿ ಆಗಿದೆ.ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ಚುನಾವಣಾ ನಡೆಸುವ ಪ್ರಶ್ನೆಯೇ ಇಲ್ಲ,ಯಡಿಯೂರಪ್ಪನವರನ್ನ ನಮ್ಮ ನಾಯಕ ಅಂತಾ ಒಪ್ಪಿಕೊಂಡಿಲ್ಲ, ಇನ್ನೂ ರಮೇಶ ಜಾರಕಿಹೊಳಿ ಯಾವ ಲೆಕ್ಕ? ಎಂದು ಸತೀಶ್ ಲೇವಡಿ ಮಾಡಿದ್ದಾರೆ.

ರಮೇಶ ಜಾರಕಿಹೊಳಿಗೆ ಆಗಾಗ ಏನಿದ್ದರೂ ಸಮಾಧಾನಕರ ಬಹುಮಾನ ಕೊಡ್ತಾರೆ,ಹೀಗಾಗಿ ರಮೇಶಗೆ ಬಂದಾಗೊಮ್ಮೆ ಚಾಕಲೇಟ್ ಕೊಡ್ತಾರೆ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಅ.7ರಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಸಂಬಂಧ ಸರ್ವಪಕ್ಷ ಸಭೆ ವಿಚಾರ,ಅ.7ರಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ ಎಂದುಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.ಅಂದು ಸಿಎಂ ಬಸವರಾಜ ಬೊಮ್ಮಾಯಿ, ಸರ್ವಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ.ಸಭೆ ಬಳಿಕ ಸಿಎಂ ಮೀಸಲಾತಿ ಸಂಬಂಧ ಕೆಲ ಘೋಷಣೆ ಮಾಡುವ ಸಾಧ್ಯತೆ ಇದೆ,ಅವರು ಪೂರ್ಣವಾಗಿ ನಮಗೆ ನ್ಯಾಯ ಕೊಡಿಸಲ್ಲ ಎಂಬ ಆತಂಕವಿದೆ,ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡ್ತಾರೆ,ಘೋಷಣೆ ಮಾಡಿದಂತೆ ಮಾಡಿ ಕಾನೂನಿನಲ್ಲಿ ತೊಡಕಿನಲ್ಲಿ ಸಿಕ್ಕಹಾಕಿಕೊಳ್ತಾರೆ,ಹೀಗೆ ಮಾಡ್ತಾರೆ ಎಂಬ ಆತಂಕ ನಮ್ಮಲ್ಲಿ ಇದೆ ಎಂದು ಸತೀಶ್ ಹೇಳಿದ್ದಾರೆ.

ಸಿಎಂ ಸರ್ವಪಕ್ಷ ಸಭೆಗೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಎಸ್ಸಿ ಎಸ್ಟಿ, ಶಾಸಕರ ಸಭೆ ಕರೆದಿದ್ದಾರೆಈ ಸಭೆಯಲ್ಲಿ ಸಿದ್ದರಾಮಯ್ಯಗೆ ಮೀಸಲಾತಿ ಯಾವ ರೀತಿ ಇರಬೇಕು ಅನೋದನ್ನ ಹೇಳುತ್ತೇನೆ‌ವಾಲ್ಮೀಕಿ ಜಯಂತಿ ಪೂರ್ವದಲ್ಲಿ ಮೀಸಲಾತಿ ನೀಡಲು ಸಮುದಾಯದ ಬೇಡಿಕೆ ಇದೆ.ಮೀಸಲಾತಿ ಸಿಗದ ಹಿನ್ನೆಲೆ ವಾಲ್ಮೀಕಿ ಸಮುದಾಯದವರು ವಾಲ್ಮೀಕಿ ಜಯಂತಿಗೆ ಬಹಿಷ್ಕಾರ ಹಾಕಿದ್ದಾರೆ ಎಂದ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

Check Also

ಬೆಳಗಾವಿ ಮಹಾನಗರದ ಅಪಾಯಕಾರಿ ತಂತಿಗಳ ತೆರವು

  ಗಣೇಶೋತ್ಸವ- ಅಪಾಯಕಾರಿ ವಿದ್ಯುತ್ ತಂತಿಗಳ ತೆರವು; ಮಾರ್ಗಗಳ ಎತ್ತರ ಹೆಚ್ಚಳ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ, -ಗಣೇಶೋತ್ಸವ ಹಿನ್ನೆಲೆಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.