ಬೆಳಗಾವಿ- ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯ ಮಾಲೀಕರು 3500 ದರ ಕೊಡಬೇಕು.ಸರ್ಕಾರ 2000 ಎರಡು ಸಾವಿರ ಸೇರಿಸಿ ರೈತರಿಗೆ ಒಟ್ಟು 5500 ಕಬ್ಬಿನ ಬೆಲೆ ಕೊಡಬೇಕು ಎಂದು ರಾಜ್ಯ ರೈತ ಸಂಘ,ಮತ್ತು ಹಸೀರು ಸೇನೆಯ ರೈತರು ನಡೆಸುತ್ತಿರುವ ಹೋರಾಟ ಎರಡನೇಯ ದಿನಕ್ಕೆ ಕಾಲಿಟ್ಟಿದೆ.
ನಿನ್ನೆ ಸೋಮವಾರ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಹೋರಾಟ ಆರಂಭಿಸಿದ ರೈತರು,ನಂತರ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ,ಡಿಸಿ ಕಚೇರಿ ಎದುರೇ ನಿನ್ನೆ ಮಧ್ಯಾಹ್ನ ಮತ್ತು ರಾತ್ರಿ ಅಡುಗೆ ಮಾಡಿ,ಡಿಸಿ ಕಚೇರಿ ಎದುರೇ ವಸತಿ ಮಾಡಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಇಂದು ಬೆಳ್ಳಂ ಬೆಳಗ್ಗೆ ವೈದ್ಯರು ಬಂದು ಪ್ರತಿಭಟನೆ ನಡೆಸುತ್ತಿರುವ ರೈತರ ಹೆಲ್ತ್ ಚೆಕಪ್ ಮಾಡಿದ್ರು. ಮುಖ್ಯಮಂತ್ರಿಗಳು ಭರವಸೆ ನೀಡುವವರೆಗೂ ಪ್ರತಿಭಟನೆ ನಿಲ್ಲೋದಿಲ್ಲ.ಎಂದು ರೈತರು ಪಟ್ಟು ಹಿಡಿದಿದ್ದಾರೆ.