ಬೆಳಗಾವಿ-ಬೆಳಗಾವಿಯಲ್ಲಿ 19 ವರ್ಷದ ಯುವತಿ ಅನುಮಾನಾಸ್ಪದ ಸಾವನ್ನೊಪ್ಪಿದ್ದು.ಅತ್ಯಾಚಾರ ಮಾಡಿ ಬಳಿಕ ಯುವತಿ ಕೊಲೆ ಮಾಡಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ತಬಸ್ಸುಮ್ ಸವದತ್ತಿ (19)ಎಂಬ ಯುವತಿ ಇಂದು ಬೆಳಗ್ಗೆ ಸಾವನ್ನೊಪ್ಪಿದ್ದಾಳೆ.
ಬೆಂಗಳೂರಿನಲ್ಲಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ತಬಸ್ಸುಮ್,ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ನಿವಾಸಿಯಾಗಿದ್ದಾಳೆ.ಆಟೋ ಚಾಲಕರಾಗಿರುವ ಮೃತ ತಬಸ್ಸುಮ್ ತಂದೆ ಇರ್ಷಾದ್‌ಅಹ್ಮದ್ ಸವದತ್ತಿ ಬೆಳಗಾವಿಯ ಖಾಸಗಿ ಆಸ್ಪತ್ರೆ ಎದುರು ಮಾದ್ಯಮಗಳಿಗೆ ಮಗಳು ತಬಸ್ಸುಮ್ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾನೆ.
ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನ ಕಾಲ್ ಸೆಂಟರ್‌ಗೆ ಕೆಲಸಕ್ಕೆ ಸೇರಿದ್ದ ತಬಸ್ಸುಮ್, ಅವಳನ್ನು ನಿನ್ನೆ ಬೆಳಗಾವಿಯಲ್ಲಿ ಅಪರಿಚಿತ ಯುವಕ ಆಸ್ಪತ್ರೆಗೆ ದಾಖಲಿಸಿದ್ದ,ಎಂಎಲ್‌ಸಿ ಮಾಡ್ತೀವಿ ಅನ್ನುತ್ತಿದ್ದಂತೆ ಯುವತಿಯ ಮೊಬೈಲ್‌ನೊಂದಿಗೆ ಆ ಯುವಕ ಎಸ್ಕೇಪ್ ಆಗಿದ್ದಾನೆ ಎಂದು ಮಾಹಿತಿ ಸಿಕ್ಕಿದೆ.
ಆಸ್ಪತ್ರೆಗೆ ಕುಟುಂಬಸ್ಥರು ಆಗಮಿಸಿದ ವೇಳೆ ನಿತ್ರಾಣ ಸ್ಥಿತಿಯಲ್ಲಿದ್ದ ತಬಸ್ಸುಮ್ ತಲೆಯ ಹಿಂಬದಿಗೆ ಗಾಯದ ಗುರುತು ಪತ್ತೆಯಾಗಿತ್ತು.ಅಷ್ಟೇ ಅಲ್ಲದೇ ಮೈಯಲ್ಲಿ ಸಿಗರೇಟ್‌ನಿಂದ ಸುಟ್ಟಿದ ಗಾಯವಿತ್ತು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.ತಬಸ್ಸುಮ್ ಳನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ತಬಸ್ಸುಮ್ ಮೃತಪಟ್ಟಿದ್ದಾಳೆ. ತಬಸ್ಸುಮ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಬೆಳಗಾವಿಯ ಎಪಿಎಂಸಿ ಪೊಲೀಸರು ಖಾಸಗಿ ಆಸ್ಪತ್ರೆಗೆ ದೌಡಾಯಿಸಿ ಪ್ರಕರಣದ ಪರಶೀಲನೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ