ಬೆಳಗಾವಿ- ಬೆಳಗಾವಿಯ ಬಸವೇಶ್ವರ ಸರ್ಕಲ್ ( ಗೋವಾ ವೇಸ್) ಹತ್ತಿರ ಪಾಲಿಕೆ ಜಾಗೆಯ ಅತಿಕ್ರಮಣ ವನ್ನು ಪಾಲಿಕೆ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
ಪಾಲಿಕೆ ಜಾಗೆಯಲ್ಲಿ,ಕೆಲವರು ಸಣ್ಣಪುಟ್ಟ ಅಂಗಡಿ ಮತ್ತು ಮನೆಗಳನ್ನು ನಿರ್ಮಿಸಿಕೊಂಡಿದ್ದರು, ಬೆಳಗಾವಿ ಪಾಲಿಕೆ ವತಿಯಿಂದ ಜಾಗೆಯನ್ನು ತೆರವು ಮಾಡುವಂತೆ ನೋಟೀಸ್ ನೀಡಲಾಗಿತ್ತು. ಆದರೂ ಜಾಗೆಯನ್ನು ಅತೀಕ್ರಮಣದಾರರು ತೆರವು ಮಾಡದೇ ಇರುವದರಿಂದ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಶುರು ಮಾಡಿದಾಗ,ಅದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು,ಗದ್ದಲದ ನಡುವೆಯೇ ಪಾಲಿಕೆ ಅಧಿಕಾರಿಗಳು ಒಂದು ಮನೆ ಮತ್ತು ಮಂದಿರ ಪಕ್ಕದ ಜಾಗೆಯಲ್ಲಿದ್ದ ಅತೀಕ್ರಮಣ ತೆರವು ಮಾಡಿದ್ದಾರೆ.
ಎಂಟು ವರ್ಷದಿಂದ ನಾವು ಇಲ್ಲೇ ಇದ್ದೇವೆ,ಇದು ನಮಗೆ ಸೇರಿದ ಜಾಗೆ,ಎಂದು ಮನೆಯಲ್ಲಿ ವಾಸವಿದ್ದ ಕುಟುಂಬಸ್ಥರು ವಾದಿಸಿದ್ದಾರೆ,ತೆರವು ಕಾರ್ಯಾಚರಣೆ ಮುಂದುವರೆದಿದ್ದು ಬಿಗಿ ಪೋಲೀಸ್ ಸರ್ಪವಾವಲನ್ನು ನಿಯೋಜಿಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ