ಬೆಳಗಾವಿ- ಇತ್ತೀಚಿಗೆ ಬೆಳಗಾವಿ ನಗರದ ಎಸ್ ಎಸ್ ಎಲ್ ಸಿ ಕಲಿಯುತ್ತಿದ್ದ ವಿಧ್ಯಾರ್ಥಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ,ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಶವವನ್ನು ಮಾರಿಹಾಳ ಪೋಲೀಸ್ ಠಾಣೆ ವ್ಯಾಪ್ತಿಯ ಮುಚ್ಚಂಡಿ ಗ್ರಾಮದಲ್ಲಿ ಎಸೆದ ಪ್ರಕರಣ ನಡೆದಿತ್ತು.
ಬೆಳಗಾವಿಯ ಜಿ.ಎ ಹೈಸ್ಕೂಲ್ ವಿಧ್ಯಾರ್ಥಿ ಪ್ರಜ್ವಲ ಶಿವಾನಂದ ಕರೆಗಾರ ಎಂಬ ವಿಧ್ಯಾರ್ಥಿಯನ್ನು ಕೊಲೆ ಮಾಡಲಾಗಿತ್ತು. ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೋಲೀಸರು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆಗೆ ವಯಕ್ತಿಕ ದ್ವೇಷವೇ ಕಾರಣ ಎಂದು ತಿಳಿದು ಬಂದಿದ್ದು,ಈ ಪ್ರಕರಣದ ಕೊಲೆ ಆರೋಪಿ,ಖನಗಾಂವ ಬಿ.ಕೆ ಗ್ರಾಮದ 19 ವರ್ಷದ ಲಕ್ಷ್ಮಣ ಯಲ್ಲಪ್ಪಾ ಹೊಸಮನಿ ಎಂಬಾತನನ್ನು ಬಂಧಿಸಿರುವ ಪೋಲೀಸರು ಬಂಧಿತ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ