ಬೆಳಗಾವಿ-ಕಿತ್ತೂರು ಉತ್ಸವ ನೋಡಿ ಹಿಂದಿರುಗುವಾಗ ಭೀಕರ ರಸ್ತೆ ಅಪಘಾತ,ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕಿತ್ತೂರು ಪಟ್ಟಣದ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಈ ಘಟನೆ ನಡೆದಿದ್ದು,ಖಾನಾಪುರ ತಾಲೂಕಿನ ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ (33), ಕರೆಪ್ಪ ತಳವಾರ (36) ಮೃತರು ಎಂದು ಗುರುತಿಸಲಾಗಿದೆ.
ಹೆದ್ದಾರಿ ದಾಟುತ್ತಿದ್ದವರ ಮೇಲೆ ಕಾರು ಹರಿದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮಧ್ಯರಾತ್ರಿ 12 ಕ್ಕೆ ಬೆಳಗಾವಿಯಿಂದ ಧಾರವಾಡ ಕಡೆಗೆ ಕಾರು ಹೊರಟಿದ್ದಾಗ ಅವಘಡ ಸಂಭವಿಸಿದೆ.ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
