ಬೆಳಗಾವಿಯಲ್ಲಿ ಗಮನ ಸೆಳೆದ ಎಮ್ಮೆಗಳ ಓಟ…
ಬೆಳಗಾವಿ-ದೀಪಾವಳಿಯ ಪಾಡ್ಯದ ದಿನವೇ 
ಕುಂದಾನಗರಿಯಲ್ಲಿ ಎಮ್ಮೆಗಳ ಓಟ ಎಲ್ಲರ ಗಮನ ಸೆಳೆದಿದೆ.
ಬೆಳಗಾವಿಯ ಚವಾಟ್ ಗಲ್ಲಿ, ಶೆಟ್ಟಿ, ಗವಳಿ ಗಲ್ಲಿಗಳಲ್ಲಿ ಎಮ್ಮೆಗಳ ಓಟ ಸ್ಪರ್ಧೆ ನಡೆಯಿತು.ಎಮ್ಮೆಗಳ ಓಟದ ಸ್ಪರ್ಧೆಗೆ ಬಿಜೆಪಿ ಶಾಸಕ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದ್ರು.ದೀಪಾವಳಿ ಹಬ್ಬದ ಪ್ರಯುಕ್ತ ಗವಳಿ ಸಮುದಾಯದಿಂದ ಎಮ್ಮೆಗಳ ಓಟದ ಸ್ಪರ್ಧೆ ಆಯೋಜನೆ ಮಾಡುವದು ಇಲ್ಲಿಯ ಸಂಪ್ರದಾಯವಾಗಿದೆ.ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಿಶೇಷ ಆಚರಣೆ ಮಾಡಲಾಗುತ್ತದೆ.
ಎಮ್ಮೆಗಳನ್ನು ಸಿಂಗರಿಸಿ ಓಟದಲ್ಲಿ ಪಾಲ್ಗೊಳ್ಳವ ಗವಳಿ ಸಮಾಜದ ಬಂಧುಗಳು ಎಮ್ಮೆಗಳನ್ನು ಓಡಿಸುತ್ತಾರೆ.ವಾದ್ಯಗಳನ್ನು ಬಾರಿಸಿ,ಬೈಕ್ ಗಳನ್ನು ರೇಸ್ ಮಾಡಿ ಎಮ್ಮೆಗಳಲ್ಲಿ ಹುರುಪು ತುಂಬಿಸಿ ಓಡಿಸುತ್ತಾರೆ.ಎಮ್ಮೆಗಳ ಓಟ ನೋಡಲು ಕಿಕ್ಕಿರುದು ಜನ ಸೇರ್ತಾರೆ.ಸ್ಕೂಟರ್, ಬೈಕ್ ಹಿಂದೆ ಓಡೋಡಿ ಬರುವ ಎಮ್ಮೆಗಳಿಂದ ನೋಡಿ ಜನ ಸಂಭ್ರಮ ಪಡುತ್ತಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ