ಬೆಳಗಾವಿ-2006ರಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ MES ಪುಂಡರು ಮಾಡಿದ ಗಲಭೆ ಪ್ರಕರಣಕ್ಕೆ ಸಂಭಂದಿಸಿದಂತೆ,ಖಾನಾಪುರ ಕೋರ್ಟ್‌ಗೆ, ಮಹಾರಾಷ್ಟ್ರದ ಶಿವಸೇನೆ ಮುಖಂಡ ಹಾಜರಾಗಿದ್ದಾರೆ.ಶಿವಸೇನೆ ಏಕನಾಥ ಶಿಂಧೆ ಬಣದ ನಾಯಕ ರಾಮದಾಸ ಖದಂ ಖಾನಾಪುರ ಕೋರ್ಟ್‌ಗೆ ಇಂದು ಗುರುವಾರ ಹಾಜರಾಗಿದ್ದಾರೆ.ರಾಮದಾಸ ಕದಂ, ಕೇಂದ್ರದ ಮಾಜಿ ಸಚಿವರಾಗಿದ್ದಾರೆ.
2006ರ ಅಕ್ಟೋಬರ್ 26ರಂದು ಖಾನಾಪುರದಲ್ಲಿ ಎಂಇಎಸ್ ಯುವ ಮೇಳಾವ್ ನಡೆದಿತ್ತು,ಖಾನಾಪುರದ ತಾರಾರಾಣಿ ಹೈಸ್ಕೂಲ್ ಮೈದಾನದಲ್ಲಿ ನಡೆದಿದ್ದ MES ಸಮಾವೇಶದಲ್ಲಿ ರಾಮದಾಸ್ ಕದಂ
ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.
2006ರಲ್ಲಿ ಮಹಾರಾಷ್ಟ್ರದ ವಿಪಕ್ಷ ನಾಯಕನಾಗಿದ್ದ ರಾಮದಾಸ್ ಕದಂ,ಪ್ರಚೋದನಕಾರಿ ಭಾಷಣವಷ್ಟೇ ಅಲ್ಲದೇ ಅಂದಿನ ಸಿಎಂ ಹೆಚ್‌ಡಿಕೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು.ರಾಮದಾಸ್ ಕದಂ ಭಾಷಣ ಬಳಿಕ ಖಾನಾಪುರದಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ ನಡೆಸಿದ್ದರು.ಮೈದಾನದಿಂದ ಹೊರಬಂದು ಸಿಕ್ಕಸಿಕ್ಕ ಕಡೆ ಎಂಇಎಸ್ ಪುಂಡರು ಕಲ್ಲು ತೂರಾಟ ನಡೆಸಿದ್ದರು.
ಈ ಸಂಧರ್ಭದಲ್ಲಿ
20 ಜನ ಪೊಲೀಸ್ ಸಿಬ್ಬಂದಿ ಸೇರಿ ಹಲವು ಜನರಿಗೆ ಗಾಯವಾಗಿತ್ತು,ಬೆಳಗಾವಿಗೆ ತೆರಳುವ ಮಾರ್ಗದಲ್ಲಿ ಕರ್ನಾಟಕ ಬಸ್‌ಗಳ ಮೇಲೆ ಕಲ್ಲು ತೂರಿದ್ದ MES ಪುಂಡರ ವಿರುದ್ದ ಕೇಸ್ ದಾಖಲಾಗಿತ್ತು.ರಾಮದಾಸ್ ಕದಂ ವಿರುದ್ಧ ಪೋಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಸಿಕೊಂಡಿದ್ದರು.
ಕೇಂದ್ರದ ಮಾಜಿ ಸಚಿವ ರಾಮದಾಸ್ ಕದಂ,ಸಾತಾರಾ ಕೃಷಿ ವಿವಿ ಪ್ರೊ. ನಿತಿನ್ ಪಾಟೀಲ್ ವಿರುದ್ಧ ಕೇಸ್ ದಾಖಲಾಗಿತ್ತು,ಖಾನಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153, 153(ಎ)ರಡಿ ಕೇಸ್ ದಾಖಲಾಗಿತ್ತು.ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ರಾಮದಾಸ್ ಕದಂಗೆ ಖಾನಾಪುರ ಕೋರ್ಟ್ ನೋಟೀಸ್ ನೀಡಿದ ಕಾರಣ ರಾಮದಾಸ್ ಕದಂ ಇವತ್ತು ಖಾನಾಪೂರ ಕೋರ್ಟಿಗೆ ಹಾಜರಾಗಿದ್ದರು.ನವೆಂಬರ್ 30ರಂದು ನ್ಯಾಯಾಲಯ ವಿಚಾರಣೆ ಮುಂದೂಡಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ