ಬೆಳಗಾವಿ – ಬೆಳಗಾವಿಯಲ್ಲಿ ಅಕ್ಟೋಬರ್ ತಿಂಗಳಲ್ಲಿಯೇ ರಾಜ್ಯೋತ್ಸವದ ತಯಾರಿ ಶುರುವಾಗುತ್ತದೆ.ಕನ್ನಡದ ಹಬ್ಬ ಎಂದಾಗ ನೆನಪಾಗೋದು ಹಿರೇಮಠದ ಹೋಳಿಗೆ ಊಟ.
ಹೌದು ರಾಜ್ಯೋತ್ಸವದ ದಿನ ತಾಯಿ ಭುವನೇಶ್ವರಿಯ ತೇರು ಎಳೆಯಲು ಲಕ್ಷಾಂತರ ಜನ ಸೇರ್ತಾರೆ, ಬೆಳಗಾವಿಯ ಹಿರೇಮಠದ ಜೋಳಿಗೆಯಿಂದ ಕನ್ನಡದ ಹಬ್ಬದಲ್ಲಿ ಪಾಲ್ಗೊಂಡ ಕನ್ನಡದ ಭಕ್ತರಿಗೆ ಹೋಳಿಗೆ ಊಟದ ವ್ಯವಸ್ಞೆ ಮಾಡ್ತಾರೆ.
ಬೆಳಗಾವಿಯಲ್ಲಿ ನಡೆಯುವ ಅದ್ಧೂರಿಯ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಪ್ರತಿ ವರ್ಷ ದಂತೆ ಈ ಬಾರಿಯೂ ಕನ್ನಡಿಗರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.
ಬೆಳಗಾವಿ ರಾಜ್ಯೋತ್ಸವಸಂಭ್ರಮಕ್ಕೆ ಸಾಕ್ಷಿಯಾಗಲಿರುವ ಕನ್ನಡ ಮನಸುಗಳಿಗೆ ಹೋಳಿಗೆ ಊಟ ಸವಿಯುವಂತ ಅವಕಾಶವನ್ನು ಮಾಡುವ ಮೂಲಕ ಹುಕ್ಕೇರಿ ಶ್ರೀ ಗಳು ತಮ್ಮ ಅನ್ನ ದಾಸೋಹ ಪರಂಪರೆ ಮುಂದುವರೆಸಿದ್ದಾರೆ.
ಈ ಬಾರಿ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿರುವ ಸುಮಾರು 50 ಸಾವಿರಕ್ಕೂ ಹೆಚ್ಚು ಕನ್ನಡಿಗರಿಗೆ ಹೋಳಿಗೆ ಊಟ ಸವಿಯಲಿದ್ದಾರೆ. ಈಗಾಗಲೇ ಇದಕ್ಕಾಗಿ ಬೆಳಗಾವಿಯ ಸರ್ದಾರ್ ಕಾಲೇಜು ಮೈದಾನದಲ್ಲಿ ಸಿದ್ದತೆ ನಡೆಯುತ್ತಿದೆ.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಬೆಳಗಾವಿಯ ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ಸಂಧರ್ಭದಲ್ಲಿ ಹಿರೇಮಠದ ಶ್ರೀಗಳು ಈ ಬಾರಿಯೂ ರಾಜ್ಯೋತ್ಸವದಲ್ಲಿ ಹೋಳಗಿ ಊಟದ ವ್ಯವಸ್ಥೆ ಮಾಡುವದಾಗಿ ಘೋಷಿಸಿದರು.