.ಬೆಳಗಾವಿ-ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಇಬ್ಬರು ಸಾವನ್ನೊಪ್ಪಿದ ಘಟನೆ ನಡೆದ ಬಳಿಕವೂ,ಐದು ದಿನಗಳು ಕಳೆದರೂ ವಾಂತಿ-ಭೇದಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ.
ಬಾಂತಿ-ಭೇದಿಯಿಂದ ಬಳಲುತ್ತಿದ್ದ ಮುದೇನೂರು ಗ್ರಾಮದ 15 ಮಂದಿ ಇಂದೂ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.ತಾಲೂಕಾಸ್ಪತ್ರೆ, ಬಾಗಲಕೋಟೆ, ಮುಧೋಳ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ಅಸ್ವಸ್ಥರನ್ನು ದಾಖಲು ಮಾಡಲಾಗಿದೆ.ಗುರುವಾರದವರೆಗೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 94 ಮಂದಿಗೂ ಚಿಕಿತ್ಸೆ ನೀಡಲಾಗುತ್ತಿದೆ.ನಿರಂತರ ವಾಂತಿ–ಭೇದಿಯ ಕಾರಣ ಹಲವರಲ್ಲಿ ತಲೆದೂರಿದ ಸುಸ್ತು, ಆಯಾಸ ಹೆಚ್ಚಾಗಿದೆ.
ಶುಕ್ರವಾರ ಮತ್ತೆ 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದೆವೆ.ಇನ್ನು ಕೆಲವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು ಸದ್ಯ ಯಾರಿಗೂ ಪ್ರಾಣಾಪಾಯ ಇಲ್ಲ.ಒಂಬತ್ತು ವೈದ್ಯರು, ನಾಲ್ವರು ಆರೋಗ್ಯ ನಿರೀಕ್ಷಕರು, ಮೂವರು ನರ್ಸ್‌ಗಳು,10 ಮಂದಿ ಆಶಾ ಕಾರ್ಯಕರ್ತೆಯರು, ಎರಡು ಆಂಬುಲೆನ್ಸ್ ಸೇರಿ 30 ಸಿಬ್ಬಂದಿ ಜನ ಗ್ರಾಮದಲ್ಲಿ ತಪಾಸಣೆ ಮುಂದುವರೆಸಿದ್ದಾರೆ.
ಮನೆಮನೆಗೆ ತೆರಳಿ ರಕ್ತದೊತ್ತಡ, ಮಧುಮೇಹ ಕೂಡ ತಪಾಸಣೆ ನಡೆಸಲಾಗುತ್ತಿದೆ.ಎಂದು
ರಾಮದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಸ್.ಬಂತಿ ಮಾಹಿತಿ ನೀಡಿದ್ದಾರೆ.